
ಮಾಸ್ತಿಕಟ್ಟೆ ಶಾಲೆಯ ವಿದ್ಯಾಥಿ೯ಗಳಿಗೆ ರೂ. 25,000 ಮೌಲ್ಯದ ಉಚಿತ ಪುಸ್ತಕ ವಿತರಣೆ
Thursday, June 19, 2025
ಮೂಡುಬಿದಿರೆ: ದಾನಿ, ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಅವರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಇಲ್ಲಿನ ಶಾಲಾ ಮಕ್ಕಳಿಗೆ ರೂ 25,000 ಮೌಲ್ಯದ ನೋಟ್ಸ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಆಚಾಯ೯, ಉಪಾಧ್ಯಕ್ಷೆ ಸುಚಿತ್ರಾ, ಶಾಲಾ ಮುಖ್ಯ ಶಿಕ್ಷಕಿ ಸೇಸಮ್ಮ ಬಿ., ಶಿಕ್ಷಕ ವೃಂದದವರು, ಪೋಷಕರು, ಅಡುಗೆ ಸಿಬಂದಿಗಳು ಈ ಸಂದಭ೯ದಲ್ಲಿದ್ದರು.