‘ಜೇನು ಗೂಡಿಗೆ ಕಲ್ಲ ಹೊಡೆದರೆ ಏನಾಗುತ್ತದೆ ಎಂದು ತಿಳಿದಿರಲಿ’

‘ಜೇನು ಗೂಡಿಗೆ ಕಲ್ಲ ಹೊಡೆದರೆ ಏನಾಗುತ್ತದೆ ಎಂದು ತಿಳಿದಿರಲಿ’

ಮಂಗಳೂರು: ಸರಕಾರದ ಬೇಜವಾಬ್ದಾರಿ ಆಡಳಿತ ಮತ್ತು ಓಲೈಕೆಯ ರಾಜಕಾರಣದಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ  ಹದೆಗೆಟ್ಟಿದೆ ಹೊರತು ಹಿಂದೂ ನಾಯಕರಿಂದ ಅಲ್ಲ.

ಓಲೈಕೆಯ ತಂತ್ರವಾಗಿ  ಆರ್ ಎಸ್ ಎಸ್ ನೇತಾರ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ  ಮೇಲೆ ಕೇಸು ದಾಖಲಿಸಲಾಗಿದೆ. ಸರಕಾರ  ಮತ್ತಷ್ಟು ಸ್ವಾಸ್ಥ್ಯ ಕೆಡಿಸಲು ಮುಂದಾಗಿರುವಂತೆ ಕಾಣುತ್ತದೆ, ಜೇನು ಗೂಡಿಗೆ ಕಲ್ಲು ಹೊಡೆಯಲು ಹೋದರೆ ಏನಾಗುತ್ತದೆ ಎಂಬುದು ಸರಕಾರಕ್ಕೆ ತಿಳಿದಿರಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯ ಡಾ.ಭರತ್ ಶೆಟ್ಟಿ ಪರೋಕ್ಷ ಎಚ್ಚರಿಕೆ ನೀಡಿದ್ದು, ಕೇಸ್ ವಾಪಾಸ್ ಪಡೆಯಲು ಒತ್ತಾಯಿಸಿದ್ದಾರೆ.

ದೇಶದ ಸಂವಿಧಾನ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ,ಮಾತನಾಡುವ  ಸ್ವಾತಂತ್ರ ನೀಡಿದೆ.ಆರ್ ಎಸ್ ಎಸ್  ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹಿಂದೂ ಸಮಾಜದ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರೆ ಅದು ಪ್ರಚೋದನೆಯೆ? ಹಿಂದೂಗಳ ಧ್ವನಿಯನ್ನು ಕೇಸ್ ಹಾಕುವ ಮೂಲಕ ಅಡಗಿಸಲು ಸಾಧ್ಯವಾಗದು.

ಅದೂ 20 ದಿನಗಳ ಬಳಿಕ ಆರ್ ಎಸ್ ಎಸ್ ನೇತಾರ ಡಾ.ಪ್ರಭಾಕರ ಭಟ್ ಅವರ ಮೇಲೆ  ವಿಳಂಬವಾಗಿ ಕೇಸು ಹಾಕಿರುವುದು ನಿಮ್ಮ ಪಕ್ಷವನ್ನು ತೊರೆಯುತ್ತಿರುವವರನ್ನು  ಸಂತೋಷ ಪಡಿಸಲು ಎಂಬಂತೆ ಕಾಣುತ್ತಿದೆ. ಹಿಂದೂ ನಾಯಕರ ಮನೆ ಫೋಟೋ ತೆಗೆಯೋದು, ನಡು ರಾತ್ರಿ ಮನೆಗೆ ತೆರಳಿ ವಿಚಾರಣೆ ನೆಪದಲ್ಲಿ ತೊಂದರೆ ಕೊಡುವುದು ಕಾನೂನು ಮೀರಿದ ನಡವಳಿಕೆಯನ್ನು ಪೊಲೀಸರು ತೋರುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಕಾರ್ಯಕರ್ತರ ಮನೆಗೆ  ನುಗ್ಗಿ ವಿಚಾರಣೆ, ಬೆದರಿಸುವ  ರ್ತನೆ ತುರ್ತು ಪರಿಸ್ಥಿತಿ  ನೆನೆಪಿಸುತ್ತಿದೆ. 

ಜೇನು ಗೂಡಿಗೆ ಕೈ ಹಾಕಿ ಪರಿಸ್ಥಿತಿ ಹದೆಗೆಡಿಸುವ ಬದಲು ,ಸುಹಾಸ್ ಶೆಟ್ಟಿ ಪ್ರಕರಣದ ಆರೋಪಿಗಳು ಇನ್ನೂ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಸಿಸಿ ಟಿವಿಯ ದೃಶ್ಯ ಎಲ್ಲಾ ಸತ್ಯವನ್ನು ಹೇಳುತ್ತಿದೆ. ನಿಮ್ಮ ಆಡಳಿತ ಪಕ್ಷದ ಅತಿಯಾದ ಓಲೈಕೆಯಿಂದ ಹಿಂದೂ ಸಮಾಜ ಬೇಸತ್ತಿದ್ದು, ಬೆದರಿಸುವ ಬದಲು, ಜನರಲ್ಲಿ ಕಾನೂನಿನ ಮೇಲೆ ನಂಬಿಕೆ ಹೆಚ್ಚಾಗಲು ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article