ದ.ಕ. ಜಿಲ್ಲಾ ಪೊಲೀಸರಿಂದ ಅಮಾಯಕ ಹಿಂದೂಗಳಿಗೆ ಕಿರುಕಳ ಪ್ರಕರಣ: ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಿಂದ ದ.ಕ. ಜಿಲ್ಲಾ ಪೊಲೀಸರಿಗೆ ನೊಟೀಸ್ ಜಾರಿ

ದ.ಕ. ಜಿಲ್ಲಾ ಪೊಲೀಸರಿಂದ ಅಮಾಯಕ ಹಿಂದೂಗಳಿಗೆ ಕಿರುಕಳ ಪ್ರಕರಣ: ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಿಂದ ದ.ಕ. ಜಿಲ್ಲಾ ಪೊಲೀಸರಿಗೆ ನೊಟೀಸ್ ಜಾರಿ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ದುಲ್ ರೆಹಮಾನ್ ಇವರ ಹತ್ಯೆಯ ನಂತರ, ತನಿಖೆಯ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು, ಮೇ ತಿಂಗಳಿನಲ್ಲಿ ಕಡಬ, ಉಜಿರೆ, ಸುಳ್ಯ ಈ ಠಾಣಾ ವ್ಯಾಪ್ತಿಯಲ್ಲಿನ ಅಮಾಯಕ ಹಿಂದೂಗಳ ಮನೆಗಳಿಗೆ ರಾತ್ರೋರಾತ್ರಿ ಹೋಗಿ ಕಿರುಕುಳ ನೀಡಿದ ಪ್ರಕರಣದಲ್ಲಿ ಜೂ.17 ರಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಲ್ಲಿ ವಿಚಾರಣೆ ನಡೆಯಿತು. 

ರಾಜ್ಯ ಪೊಲೀಸ್ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಕೆ.ಎನ್ ಸುಧೀಂದ್ರರಾವ್ ವಿಚಾರಣೆ ನಡೆಸಿ, ಅಮಾಯಕ ಹಿಂದೂಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ನೊಟೀಸ್ ಹೊರಡಿಸಿದರು. ಮುಂದಿನ ವಿಚಾರಣೆ ಜುಲೈ 15 ರಂದು ನಡೆಯಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಸ್ತ ಹಿಂದೂ ಸಂಘಟನೆಗಳು ಒಟ್ಟಾಗಿ ರಾಜ್ಯವ್ಯಾಪಿ ಕಾನೂನು ಹೋರಾಟ ಪ್ರಾರಂಭಿಸಿದ್ದರು. ಜೂ.4 ರಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಎನ್.ಕೆ. ಸುಧೀಂದ್ರ ರಾವ್ ಇವರಿಗೆ ದೂರು ನೀಡಲಾಗಿತ್ತು. 

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಅಮೃತೇಶ್ ಎನ್.ಪಿ., ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. 

ಅಷ್ಟೇ ಅಲ್ಲದೇ ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಈ ವಿಷಯವಾಗಿ ರಾಜ್ಯದ ವಿಜಯಪುರ, ಹುಬ್ಬಳ್ಳಿ, ಕಾರವಾರ, ಶಿವಮೊಗ್ಗ, ಹಾಸನ, ಉಡುಪಿ ಮತ್ತು ಮಂಗಳೂರಿನಲ್ಲಿ ಸಹ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಪೊಲೀಸರ ಈ ತಾರತಮ್ಯದ ಕೃತ್ಯ ಕೂಡಲೇ ನಿಲ್ಲಬೇಕೆಂದು ಮನವಿ ಮಾಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article