
ಪೊಲೀಸರಿಂದ ಹಿಂದೂ ಸಮಾಜದವರನ್ನು ಗುರಿಯಾಗಿಸಿ ಮಧ್ಯರಾತ್ರಿಯಲ್ಲಿ ಅಕ್ರಮ ಪ್ರವೇಶ: ಶಾಸಕ ಡಾ. ಭರತ್ ಶೆಟ್ಟಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು-ತನಿಖೆ ಪ್ರಾರಂಭ
Tuesday, June 17, 2025
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ಕೇಸು ಇಲ್ಲದ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಹಿಂದೂ ಸಮಾಜದ ಹಿರಿಯರು, ಯುವಕರು, ಮಹಿಳೆಯರನ್ನುವ ಗುರಿಯಾಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ವಿನಾಕಾರಣ ಮಧ್ಯರಾತ್ರಿಯ ಸುಮಾರಿಗೆ ಮಹಿಳೆಯರು ಮಕ್ಕಳು ಇರುವ ಮನೆಗಳಿಗೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಪ್ರವೇಶಿಸುವುದಲ್ಲದೆ ಅವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಫೋಟೋ ತೆಗೆದು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ ಮೇರೆಗೆ ಆಯೋಗ ತನಿಖೆ ಆರಂಭಿಸಿದೆ.
ಮಂಗಳವಾರ ಶಾಸಕರನ್ನ ಭೇಟಿಯಾಗಿ ಆಯೋಗದ ತನಿಕಾ ತಂಡವು ಮೊದಲ ಹಂತದ ಮಾಹಿತಿಯನ್ನು ಪಡೆದುಕೊಂಡಿತು.
ಈ ಸಂದರ್ಭ ಶಾಸಕರು ಸಮಾಜ ಸೇವಾ ಕಾರ್ಯ ಮಾಡುತ್ತಿದ್ದವರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಮಾನಸಿಕವಾಗಿ ಆದಂತಹ ಆಘಾತ, ಕಿರುಕುಳ ಕುರಿತು ಸವಿವರವಾಗಿ ಮಾಹಿತಿ ಒದಗಿಸಿದ್ದಾರೆ.
ಆಯೋಗದ ತನಿಕಾ ತಂಡವು ಜಿಲ್ಲೆಯ ವಿವಿಧ ತಾಲೂಕುಗಳಿಗೆ ತೆರಳಿ ಕಿರುಕಳಕ್ಕೊಳಗಾದ ಜನರಿಂದ ಮಾಹಿತಿ ಪಡೆಯಲಿದೆ. ಪೊಲೀಸ್ ಇಲಾಖೆಯಿಂದ ಆದ ಅನ್ಯಾಯದ ಕುರಿತಾಗಿ ಮಾಹಿತಿ ಪಡೆಯಲಿದೆ ಎಂದು ತಿಳಿದುಬಂದಿದೆ.
ಆಯೋಗದ ತನಿಕಾ ತಂಡ ನಿಗದಿತ ಅವಧಿಯಲ್ಲಿ ತಣಿಕೆ ಪೂರ್ಣಗೊಳಿಸಿ ಆಯೋಗಕ್ಕೆ ವರದಿ ಸಲ್ಲಿಸಲಿದೆ ಎಂದು ಬಂದಿದೆ.