
ಮಲೇಷ್ಯಾ ಸ್ಪೀಕರ್ ವೈ.ಬಿ ತಾನ್ ಶ್ರೀ ದಾತೋ (ಡಾ.) ಜೋಹರಿ ಬಿನ್ ಅಬ್ದುಲ್ ಅವರನ್ನು ಭೇಟಿಯಾದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್
Tuesday, June 17, 2025
ಮಂಗಳೂರು: ಮಲೇಷಿಯಾ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ರವರು ಮಲೇಷ್ಯಾ ಜನ ಪ್ರತಿನಿಧಿಗಳ ಸಭೆಯ ಸ್ಪೀಕರ್ (Speaker Of Dewan Rakyat) ವೈಬಿ ತಾನ್ ಶ್ರೀ ದಾತೋ (ಡಾ.) ಜೋಹರಿ ಬಿನ್ ಅಬ್ದುಲ್ ರವರನ್ನು ಮಲೇಷಿಯಾ ಪಾರ್ಲಿಮೆಂಟ್ ಹೌಸ್ ನಲ್ಲಿ ಭೇಟಿಯಾಗಿ ಪ್ರಜಾ ಪ್ರಭುತ್ವದ ಪ್ರಸಕ್ತ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದರು.
ಮುಂದಿನ ದಿನಗಳಲ್ಲಿ ಮಲೇಷಿಯಾ ಜನ ಪ್ರತಿನಿಧಿಗಳು ಹಾಗೂ ಕರ್ನಾಟಕ ಶಾಸಕರ ಮದ್ಯೆ ಎರಡು ದೇಶದ ಪ್ರಜಾ ಪ್ರಭುತ್ವ ಸಂಸದೀಯ ವ್ಯವಹಾರಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.