
ಅಸಮರ್ಪಕ ತಡೆಗೋಡೆಯೇ ಕೃತಕ ನೆರೆಗೆ ಕಾರಣ
ಮಂಗಳೂರು: ಅಸಮರ್ಪಕವಾದ ತಡೆಗೋಡೆಯ ಜಪ್ಪಿನಮೊಗರು ವ್ಯಾಪ್ತಿಯಲ್ಲಿ ಕೃತಕ ನೆರೆಗೆ ಕಾರಣವಾಗಿದೆ ಎಂದು ಜಪ್ಪಿನಮೊಗರು ಕಾಂಗ್ರೆಸ್ ವಾರ್ಡ್ ಸಮಿತಿ ಆರೋಪಿಸಿದೆ.
ಜಪ್ಪಿನಮೊಗರು ಪ್ರದೇಶದ ನಾಗಲ್ಲು ಉರುಂಡೆತೋಟ ಪ್ರದೇಶದಲ್ಲಿ ವಿಪರೀತ ಮಳೆಯಿಂದ ರಾಜಕಾಲುವೆ ತಡೆಗೋಡೆ ಕೊಚ್ಚಿ ಹೋಗಿ ತೋಚಿಲ, ನಾಗಲ್ಲು ಗಣೇಶಪುರ, ಹೊಯ್ಗೆ ರಾಶಿ, ವೈದ್ಯನಾಥನಗರ, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಹಿತ್ತಲು, ಅಂಗಡಿಮಾರು ಪ್ರದೇಶಗಳಲ್ಲಿ ಕೃತಕ ನೆರೆಗೆ ಕಾರಣವಾಗಿದೆ ಎಂದರು.
ರಾಜಕಾಲುವೆಯ ಒಂದು ಬದಿಯಲ್ಲಿ ಅಸಮರ್ಪಕ ತಡೆಗೋಡೆ ನಿರ್ಮಾಣದಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ. ಆದರೆ, ಜಪ್ಪಿನಮೊಗರು ಸುತ್ತಮುತ್ತ ಕೃತಕ ನೆರೆಯಿಂದ ಸಂಭವಿಸಿದ ಅಪಾರ ಪ್ರಮಾಣದ ಸೊತ್ತು ಹಾನಿಯ ಬಗ್ಗೆ ಸ್ಥಳೀಯ ಶಾಸಕರು ಹಾಗೂ ನಿಕಟಪೂರ್ವ ಕಾರ್ಪೊರೇಟರ್ ವೀಣಾ ಮಂಗಳ ಜವಾಬ್ಧಾರಿಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಸುಮಾರು 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಂಕನಾಡಿ, ಪಂಪ್‌ವೆಲ್, ಎಕ್ಕೂರು ಮೊದಲಾದ ಪ್ರದೇಶಗಳ ಮೂಲಕ ಹಾದುಹೋಗುವ ರಾಜಕಾಲುವೆ ನಾಗಲ್ಲು ಉರುಂಡೆತೋಟ ಎಂಬಲ್ಲಿ ಸುಮಾರು 25 ಮೀಟರ್‌ಗಳಷ್ಟು ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದೆ ಎಂದರು.
ಮಾಜಿ ಕಾರ್ಪೊರೇಟರ್ ಜೆ.ನಾಗೇಂದ್ರ ಕುಮಾರ್, ಸ್ಥಳೀಯರಾದ ಹರ್ಬರ್ಟ್ ಡಿಸೋಜಾ, ತಾರನಾಥ ಭಂಡಾರಿ, ಶೇಖರ್ ಸನಿಲ್, ರವಿರಾಜ್ ಕಡೇಕಾರ್, ಪ್ರಶಾಂತ್ ಡಿಸೋಜಾ, ಕೀರ್ತನ್ ಕುಮಾರ್ ಉಪಸ್ಥಿತರಿದ್ದರು.