
ರೈಲು ಸಂಚಾರ ವಿಸ್ತರಣೆ
Wednesday, June 18, 2025
ಮಂಗಳೂರು: ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಜುಲೈ 1ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿದೆ.
ಈ ಹಿಂದೆ ಜೂನ್ 30ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲ್ಪಟ್ಟಿದೆ. ಅದೇ ರೀತಿ, ಜುಲೈ 1 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಇದೀಗ ಜುಲೈ 2 ರಿಂದ 2026 ಜನವರಿ 1 ರವರೆಗೆ ವಿಸ್ತರಿಸಲಾಗಿದೆ.