
ತುಳುವ ಮಹಾಸಭೆ ಮಂಗಳೂರು ಸಂಚಾಲಕರಾಗಿ ಅರವಿಂದ ಬೆಳ್ಚಡ ನೇಮಕ
ಮಂಗಳೂರು: ತುಳುವ ಮಹಾಸಭೆ ಮಂಗಳೂರಿನ ನೂತನ ಸಂಚಾಲಕರಾಗಿ ಅರವಿಂದ ಬೆಳ್ಚಡ ನೇಮಕಗೊಂಡಿದ್ದಾರೆ.
ತುಳುನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸಿದ ತುಳುವ ಮಹಾಸಭೆ, ತನ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚಟುವಟಿಕೆಗೆ ಹೊಸ ಉತ್ಸಾಹ ತುಂಬಿಕೊಳ್ಳುತ್ತಿದೆ. 1928ರಲ್ಲಿ ಸ್ಥಾಪನೆಯಾದ ಈ ಚಳವಳಿ ಪುನಶ್ಚೇತನಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಮಹಾಸಭೆಯ ಮಂಗಳೂರು ತಾಲೂಕು ಸಂಚಾಲಕರಾಗಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಮತ್ತು ಮಾರ್ಗದರ್ಶಕರಾದ ಅರವಿಂದ ಬೆಳ್ಚಡ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿಯ ಮೂಲಕ ಮಹಾಸಭೆ ಮಂಗಳೂರಿನಲ್ಲಿ ತನ್ನ ಚಟುವಟಿಕೆಗಳಿಗೆ ಗಂಭೀರತೆ ಮತ್ತು ಆತ್ಮೀಯತೆ ನೀಡಲಿದೆ. ಅರವಿಂದ ಬೆಳ್ಚಡ ಅವರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು, ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಮಾತನಾಡಿ, ತುಳುನಾಡು ಕಳರಿ ಮತ್ತು ಮರ್ಮ ಚಿಕಿತ್ಸೆಯ ಪುನಶ್ಚೇತನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಜಾತಿ, ಮತ, ಭಾಷಾ ಸೌಹಾರ್ದತೆ ಕಾಪಾಡುವುದು, ನಶಿಸಿದ ಆರಾಧನೆಗಳ ಅಧ್ಯಯನ ಮತ್ತು ಪುನರುಜ್ಜೀವನ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಾದರಿ ಯೋಜನೆಗಳ ರೂಪಣೆ, ತುಳು ಸಾಹಿತ್ಯ, ಕಲೆ ಹಾಗೂ ಜನಪದ ಪರಂಪರೆಗೆ ಉತ್ತೇಜನೆ, ಪ್ರಾದೇಶಿಕ ಭಾಷೆಗಳ ಸಂಸ್ಕೃತಿಗೆ ಗೌರವ ಮತ್ತು ಅಧ್ಯಯನ, ಯುವಕರ ಉದ್ಯೋಗೋಪಯೋಗಿ ತರಬೇತಿ, ಕೃಷಿ ಮತ್ತು ಕುಲ ಕಸುಬುಗಳ ಪ್ರೋತ್ಸಾಹ, ಶಾಲಾ-ಕಾಲೇಜುಗಳಲ್ಲಿ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮಗಳು, ತುಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.