
ವಿಜಯಪುರ-ಮಂಗಳೂರು ರೈಲು: ವೇಳಾಪಟ್ಟಿ ಬದಲು
Friday, June 6, 2025
ಮಂಗಳೂರು: ವಿಜಯಪುರ-ಮಂಗಳೂರು ನಡುವೆ ಸಂಚರಿಸು ರೈಲನ್ನು ಮತ್ತೆ ವಿಸ್ತರಣೆಎ ಮಾಡಲಾಗಿದ್ದು, ವೇಳಾ ಪಟ್ಟಿಯಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ.
ಜುಲೈ 1ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್ನಿಂದ ಮಂಗಳೂರು-ವಿಜಯಪುರ ರೈಲು ಮಧ್ಯಾಹ್ನ 2.30ರ ಬದಲಿಗೆ 4.45ಕ್ಕೆ ಹೊರಡಲಿದ್ದು, ವಿಜಯಪುರಕ್ಕೆ ಮರುದಿನ 11.15ಕ್ಕೆ ತಲಪಲಿದೆ.
ಕೋವಿಡ್ ಪೂರ್ವದಲ್ಲಿ ಈ ರೈಲು ಇದೇ ಸಮಯಕ್ಕೆ ಹೊರಡುತ್ತಿದ್ದು, ಮಂಗಳೂರಿಗೆ ಬರುವ ಯಾತ್ರಿಕರಿಗೆ, ವಿದ್ಯಾರ್ಥಿಗಳಿಗೆ ನೆರವಾಗುತ್ತಿತ್ತು. ಆ ಬಳಿಕ ಮಧ್ಯಾಹ್ನ 2.30ಕ್ಕೆ ಹೊರಡುತ್ತಿದ್ದುದರಿಂದ ಸಮಸ್ಯೆಯಾಗಿತ್ತು. ಈ ಕುರಿತು ರೈಲ್ವೇ ಯಾತ್ರಿ ಸಂಘಗಳು, ಸಂಸದರು ಸಮಯ ಬದಲಾವಣೆಗೆ ಒತ್ತಾಯಿಸಿದ್ದರು. ಈಗ ನಂ.07377 ವಿಜಯಪುರ-ಮಂಗಳೂರು ಸೆಂಟ್ರಲ್ ರೈಲನ್ನು ಇದುವರೆಗೆ ಜೂ.30ರ ವರೆಗೆ ವಿಸ್ತರಿಸಲಾಗಿತ್ತು. ಹೊಸ ಆದೇಶದಂತೆ ರೈಲನ್ನು ಡಿಸೆಂಬರ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ನಂ.07378 ರೈಲು ಜು.೧ರ ವರೆಗೆ ವಿಸ್ತರಿಸಲಾಗಿತ್ತು. ಹೊಸ ಆದೇಶದ ಅನ್ವಯ 2026ರ ಜ.1ರ ವರೆಗೆ ವಿಸ್ತರಣೆ ಮಾಡಲಾಗಿದೆ.