ಭಾರೀ ಮಳೆಯಿಂದ ಅಪಾರ ನಷ್ಟ ಪರಿಹಾರಕ್ಕೆ ಆಗ್ರಹ

ಭಾರೀ ಮಳೆಯಿಂದ ಅಪಾರ ನಷ್ಟ ಪರಿಹಾರಕ್ಕೆ ಆಗ್ರಹ

ಮಂಜೇಶ್ವರ: ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ಮಂಜೇಶ್ವರ, ಕುಂಜತ್ತೂರು, ಮಾಡ, ಮಿಂಜ ಮುಂತಾದ ಸ್ಥಳಗಳಲ್ಲಿ ವ್ಯಾಪಕ ನಾಶನಷ್ಟಗಳು ಸಂಭವಿಸಿದ್ದು, ಹಲವಾರು ಜನರು ತಮ್ಮ ಸೂರುಗಳನ್ನು ಕಳೆದುಕೊಂಡು ಬಹಳ ಸಂಕಷ್ಟ ಪಡುತ್ತಿದ್ದು, ಕೆಲವು ಭಾಗಗಳಲ್ಲಿ ಕೃಷಿ ನಾಶಗಳು ಸಂಭವಿಸಿದ್ದು ಆದುದರಿಂದ ತಕ್ಷಣವೇ ಅಧಿಕಾರಿಗಳು ಸ್ಪಂದಿಸಿ ಆದಷ್ಟು ಬೇಗ ನಷ್ಟ ಪರಿಹಾರವನ್ನು ಒದಗಿಸಬೇಕಾಗಿ ಬಿಜೆಪಿ ನೇತಾರರಾದ ನವೀನ್ ರಾಜ್ ಕೆ.ಜೆ. ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ. 

ಮಳೆಗಾಲ ಪ್ರಾರಂಭದ ಮೊದಲೇ ಕೃತಕ ನೆರೆ ಉಂಟಾಗುವ ಸ್ಥಳಗಳನ್ನು ಗಮನಿಸಿ, ಅದಕ್ಕೆ ಇರುವ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ತೋಡುಗಳಲ್ಲಿ ಶೇಖರಿಸುತ್ತಿರುವ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಆಗ್ರಹಿಸಿದರು. 

ಇದೆ ವೇಳೆ ನೆರೆ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ತಕ್ಷಣವೇ ಸ್ಪಂದಿಸಿದ ಸಂಘ ಸಂಸ್ಥೆಯ ಹಾಗೂ ಊರಿನ ಯುವಕರನ್ನು ಅಭಿನಂದಿಸಿದರು. ಕಣ್ವತೀರ್ಥದಲ್ಲಿ ಊರೇ ನೀರಲ್ಲಿ ಮುಳುಗುತ್ತಿರುವ ಸಂದರ್ಭದಲ್ಲಿ ರಸ್ತೆಯನ್ನೇ ಕಡಿದು ನೀರು ಸಮುದ್ರಕ್ಕೆ ಹರಿಯಲು ವ್ಯವಸ್ಥೆ ಮಾಡಿದ ಸ್ಥಳೀಯ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article