
ಇರುವೈಲ್ ಡಾಕ್ಟರ್ ಕೃಷ್ಣಮೂರ್ತಿ ನಿಧನ
Sunday, June 29, 2025
ಮೂಡುಬಿದಿರೆ: ಇರುವೈಲ್ ಡಾಕ್ಟ್ರು ಎಂದೇ ಹೆಸರುವಾಸಿಯಾಗಿದ್ದ, ದಂಬೆಕೋಡಿ ನಿವಾಸಿ ಡಾ. ಕೃಷ್ಣ ಮೂರ್ತಿ ಇರುವೈಲು (95) ಅವರು ಶುಕ್ರವಾರ ನಿಧನ ಹೊಂದಿದ್ದಾರೆ.
ಇರುವೈಲು ಗ್ರಾ.ಪಂಚಾಯತ್ ನಲ್ಲಿ ಸತತ 3 ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಉತ್ತಮ ಸೇವೆಯನ್ನು ನೀಡಿದ್ದರು.
ಎರ್ನಾಕುಲಂನಲ್ಲಿ ಆಯುವೇ೯ದ ಮೆಡಿಕಲ್ ಕಾಲೇಜಿನಲ್ಲಿ ಕಲಿತು ಊರಿನವರಿಗೆ ಸಹಾಯವಾಗಲೆಂದು ಊರಲ್ಲೇ ವೈದ್ಯಕೀಯ ವೃತ್ತಿ ಪ್ರಾರಂಭಿಸಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಇರುವೈಲು ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದರು.
ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.