ಜೆಇಇ ಅಡ್ವಾನ್ಸ್ನಲ್ಲಿ  ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ

ಜೆಇಇ ಅಡ್ವಾನ್ಸ್ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ


ಮೂಡುಬಿದಿರೆ: ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯ ಫಲಿತಾಂಶದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಐದು ಸಾವಿರ ರ‍್ಯಾಂಕ್‌ನ ಒಳಗೆ ಹಾಗೂ 13 ಜನ ವಿದ್ಯಾರ್ಥಿಗಳು ಹತ್ತು ಸಾವಿರ ರ‍್ಯಾಂಕ್‌ನ ಒಳಗಡೆ  ಸ್ಥಾನ ಪಡೆದಿದ್ದಾರೆ.


ಕೆಟಗರಿ ವಿಭಾಗದಲ್ಲಿ ಆಕಾಶ ಪೂಜಾರ್ (924 ರ‍್ಯಾಂಕ್),  ತನುಶ್ರೀ ಹೆಚ್‌ಟಿ (1295 ರ‍್ಯಾಂಕ್),  ಪುನೀತ್ ಕುಮಾರ್ ಬಿಜಿ(2030 ರ‍್ಯಾಂಕ್), ತುಷಾರ್ ಘನಶ್ಯಾಮ್ (3027 ರ‍್ಯಾಂಕ್),  ಸುಮಿತ್ (3359 ರ‍್ಯಾಂಕ್) ಮೋಹನ್ ಶಿವಶಂಕರ್ ಪೈ (3510 ರ‍್ಯಾಂಕ್),  ಜೀವನ್ ಪಿ ವಿ (4164 ರ‍್ಯಾಂಕ್), ಪಾಡುರಂಗ ಜಿವಿ (4222 ರ‍್ಯಾಂಕ್), ರೋಶನ್ ಶೆಟ್ಟಿ (5857 ರ‍್ಯಾಂಕ್), ಗಣೇಶ್ (6073 ರ‍್ಯಾಂಕ್), ಭಾನು ಹರ್ಷ (6485 ರ‍್ಯಾಂಕ್), ಶೋಹೆಬ್ ರೆಹ್ಮಾನ್ (7184 ರ‍್ಯಾಂಕ್), ವಿಜೇತ್ ಜಿ ಗೌಡ (8993 ರ‍್ಯಾಂಕ್ ) ಪಡೆದಿದ್ದಾರೆ.  


ಒಟ್ಟು ಸಂಸ್ಥೆಯ 20 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.












Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article