
ಉಡುಪಿ ನೂತನ ಎಸ್ಪಿ ಅವರನ್ನು ಸ್ವಾಗತಿಸಿದ ಕರ್ನಾಟಕ ಪರ್ತಕರ್ತರ ಸಂಘದ ಉಡುಪಿ ಘಟಕ
Tuesday, June 3, 2025
ಉಡುಪಿ: ಕರ್ನಾಟಕ ಪತ್ರಕರ್ತರ ಸಂಘ (ರಿ.) ಬೆಳಗಾವಿ ಇವರ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯವರಾಗಿರುವ ಹರಿರಾಂ ಶಂಕರ್ ಅವರನ್ನು ಜಿಲ್ಲೆಗೆ ಸ್ವಾಗತಿಸುವ ಮೂಲಕ ಗೌರವಿಸಲಾಯಿತು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಿ ಶಾಂತಿ ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ವಿನಂತಿಸಲಾಯಿತು.
ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಪೂಜಾರಿ, ಪ್ರಕಾಶ್ ಕೆ. ಪೂಜಾರಿ, ಮಹೇಶ್ ಕುಮಾರ್, ಜನಾರ್ಧನ ಕೆ.ಎಮ್ ಮತ್ತಿತರರು ಉಪಸ್ಥಿತರಿದ್ದರು.