ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಾಹಿತಿ ಕಾರ್ಯಗಾರ

ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಾಹಿತಿ ಕಾರ್ಯಗಾರ


ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಅಗತ್ಯತೆ ಅದರ ಉದ್ದೇಶ ಹಾಗೂ ವಿದ್ಯಾರ್ಥಿವೇತನವನ್ನು ಯಾವ ರೀತಿ ಪಡೆಯಬಹುದು ಎಂಬುದರ ಬಗ್ಗೆ, ವಿದ್ಯಾರ್ಥಿವೇತನವನ್ನು ಪಡೆಯಬೇಕಾದರೆ ಸರಿಯಾದ ದಾಖಲೆಗಳನ್ನು ಖಾತರಿ ಪಡೆಸಿಕೊಳ್ಳುವುದರ ಬಗ್ಗೆ ಅರಿತುಕೊಳ್ಳುವುದು ಹಾಗೂ ವಿದ್ಯಾರ್ಥಿವೇತನ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಾಲೇಜಿನ ಹಳೆ ವಿದ್ಯಾಥಿ೯, ಎಡಪದವು ಸೀನಿಯರ್ ಇಂಜಿನಿಯರ್ ಕೆಮಿಕಲ್ ಫರ್ಟಿಲೈಸರ್ಸ್ ಚಂದ್ರಶೇಖರ್ ಎಸ್. ತಿಳಿಸಿದರು.  

ಅವರು ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ವತಿಯಿಂದ  ಶುಕ್ರವಾರ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆದ ವಿದ್ಯಾರ್ಥಿವೇತನ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಸುಮಾರು 50 ಬಗೆಯ ವಿದ್ಯಾರ್ಥಿವೇತನ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.   

ಆರ್ಥಿಕವಾಗಿ ಹಿಂದುಳಿದ ಮತ್ತು ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 

ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. 

ಪದವಿ ಪೂರ್ವ  ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷೀ ಉಪಸ್ಥಿತರಿದ್ದರು. 

ಗಣಕ ವಿಭಾಗದ ಉಪನ್ಯಾಸಕಿ  ಅರುಣ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article