
ಮೋಹನ ಕುಂಟಾರ್, ಹೆಚ್.ಎಸ್ ಅನುಪಮಾ, ಸಬಿತಾ ಬನ್ನಾಡಿ ಮತ್ತು ಶ್ರೀಪಾದ ಭಟ್‌ರಿಗೆ "ಶಿವರಾಮ ಕಾರಂತ" ಪುರಸ್ಕಾರ
Friday, June 20, 2025
ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಈ ಸಾಲಿನ "ಶಿವರಾಮ ಕಾರಂತ ಪುರಸ್ಕಾರ"ಕ್ಕೆ ನಾಲ್ವರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.
ಮೋಹನ್ ಕುಂಟಾರ್ ಅವರ "ಅನುವಾದ ಒಲವು ನಿಲುವುಗಳು", ಹೆಚ್.ಎಸ್. ಅನುಪಮಾರವರ "ಬೆಡಗಿ ನೊಳಗು-ಮಹಾದೇವಿ ಅಕ್ಕ", ಸಬಿತಾ ಬನ್ನಾಡಿ ಅವರ "ಇದಿರು ನೋಟ" ಮತ್ತು ಶ್ರೀಪಾದ ಭಟ್‌ರವರ "ದಡವ ನೆಕ್ಕಿದ ಹೊಳೆ" ಕೃತಿಗಳನ್ನು ಆಧರಿಸಿ ಶಿವರಾಮ ಕಾರಂತ ಪುರಸ್ಕಾರಗಳನ್ನು ನೀಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.