ಜಿಲ್ಲೆಯಲ್ಲಿ ಶಾಂತಿ ಸೌಹಾದ೯ತೆ ಕದಡಲು ಕಾಂಗ್ರೆಸ್-ಬಿಜೆಪಿ ಪಕ್ಷಗಳೇ ಕಾರಣ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪ

ಜಿಲ್ಲೆಯಲ್ಲಿ ಶಾಂತಿ ಸೌಹಾದ೯ತೆ ಕದಡಲು ಕಾಂಗ್ರೆಸ್-ಬಿಜೆಪಿ ಪಕ್ಷಗಳೇ ಕಾರಣ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪ


ಮೂಡುಬಿದಿರೆ: ಸರಕಾರಗಳನ್ನು ಆಳುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಮನುವಾದಿ ಪಕ್ಷಗಳು.  ಪ್ರಚೋದನೆ ನೀಡುವುದು ಎಂಎಲ್ ಎ, ಎಂಪಿಗಳು ಇವರ ಬೆಂಬಲವಿಲ್ಲದ ಯಾವುದೇ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಶಾಂತಿ-ಸೌಹಾದ೯ತೆ   ಹಾಳಾಗಲು ಈ ಎರಡು ಪಕ್ಷಗಳೇ ಕಾರಣ ಎಂದು ಬಹುಜನ ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.

ಅವರು ಇತ್ತೀಚಿಗೆ ಬಂಟ್ವಾಳದ ಕೊಳ್ತಮಜಲಿನಲ್ಲಿ ನಡೆದ ಹತ್ಯೆಗೆ ಬಲಯಾಗಿರುವ ಅಬ್ದುಲ್ ರಹೀಮಾನ್ ಅವರ ಮನೆಗೆ ಭೇಟಿ ನೀಡಿ ಹೆತ್ತವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ನಂತರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಯಾವುದೇ ಜಾತಿ, ಧಮ೯ವನ್ನು ನೋಡದೆ ಬಡವರಿಗೆ, ಅಸಹಾಯಕ ಕುಟುಂಬಗಳಿಗೆ ನೆರವಾಗುತ್ತಿದ್ದ ಅಬ್ದುಲ್ ರಹೀಮಾನ್ ನನ್ನು ಧಮ೯ದ ಹೆಸರಿನಲ್ಲಿ ಕೊಲೆ ಮಾಡಿರುವುದು ಖಂಡನೀಯ. ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಊರೆಂದು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ ಆದರೆ ಇಂದು ಕೋಮುಗಲಭೆ, ಕೊಲೆಗೆ ಹೆಸರುವಾಸಿಯಾಗುತ್ತಿರುವುದು ದುರಂತ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರಗಳು ವ್ಯಥ೯ವಾಗಿದೆ. ಇಲ್ಲಿ ಶಾಂತಿ ಸೌಹಾದ೯ತೆ ನೆಲೆಸಬೇಕಾಗಿದೆ ಅದಕ್ಕಾಗಿ ಯಾರೇ ಧಮ೯ದ ಹೆಸರಿನಲ್ಲಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಹಿಸಿದರು.

ಹತ್ಯೆಯಾಗಿರುವ ಅಬ್ದುಲ್ ರಹೀಮಾನ್ ಕುಟುಂಬಕ್ಕೆ ಸರಕಾರ ರೂ. 1 ಕೋಟಿ ಪರಿಹಾರ ನೀಡಬೇಕು., ಸರಕಾರಿ ನೌಕರಿಯನ್ನು ನೀಡಬೇಕು.ಪ್ರಚೋದನಕಾರಿ ಭಾಷಣ ಮಾಡುವ ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಇತರರ ವಿರುದ್ಧ ಕಾನೂನು ಕ್ರಮಕೈ ಗೊಳ್ಳಬೇಕು, ಕೋಮುಗಲಭೆಗೆ ಆಥಿ೯ಕ ನೆರವನ್ನು ನೀಡುವವರನ್ನು ಕಂಡು ಹಿಡಿದು ಕ್ರಮ ಜರುಗಿಸಬೇಕು.ಅಪಾಯಕಾರಿ ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಮಾಡುವ ಮೂಲಕ ಸಮಾಜಕ್ಕೆ ಕಠಿಣ ಸಂದೇಶ ವನ್ನು ನೀಡುವಂತ್ತಾಗಬೇಕು ಎಂದ ಅವರು ಲಾ&ಆಡ೯ರ್ ಗೆ ಸರಕಾರ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್, ಪ್ರಧಾನ ಕಾಯ೯ದಶಿ೯ಗಳಾದ ಕೆ.ಟಿ ರಾಧಾಕೃಷ್ಣ, ಕಾಂತಪ್ಪ ಆಲಂಗಾರು, ಕಾಯ೯ದಶಿ೯ ಝಾಕೀರ್ ಆಲಿಖಾನ್,   ದ. ಕ. ಜಿಲ್ಲಾ ಸಮಿತಿಯ ಗೋಪಾಲ್ ಗುಟ್ಟೂರು, ಮುಖಂಡರಾದ ಶ್ರೀನಿವಾಸ್, ನಾರಾಯಣ ಶೆಟ್ಟಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article