
ಗ್ಯಾರೇಜ್ನಲ್ಲಿ ರಿಪೇರಿ ಮಾಡಿಟ್ಟಿದ್ದ ಇನ್ನೋವಾ ಕಾರಿನಲ್ಲಿ ಆಕಸ್ಮಿಕ ಬೆಂಕಿ
Friday, June 6, 2025
ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ಬಳಿಯ ಗ್ಯಾರೇಜೊಂದರಲ್ಲಿ ದುರಸ್ತಿ ಮಾಡಿ ಇಟ್ಟಿದ್ದ ಇನ್ನೋವಾ ಕಾರಿನಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿದ್ದು, ಸ್ಥಳೀಯರು ಬೆಂಕಿ ನಂದಿಸಿದ್ದಾರೆ.
ಕಿನ್ನಿಗೋಳಿ ಸಮೀಪದ ಬಟ್ಟ ಕೋಡಿಯ ವ್ಯಕ್ತಿಯೊಬ್ಬರು ಇನ್ನೋವಾ ಕಾರನ್ನು ಮುರುಕಾವೇರಿ ಬಳಿಯ ಕಾರು ಗ್ಯಾರೇಜ್ನಲ್ಲಿ ದಿನದ ಹಿಂದೆ ರಿಪೇರಿಗೆ ಕೊಟ್ಟಿದ್ದರು. ಅದರಂತೆ ಗ್ಯಾರೇಜ್ ಮಾಲೀಕ ಕಾರು ರಿಪೇರಿ ಮಾಡಿ ಶುಕ್ರವಾರ ಗ್ಯಾರೇಜ್ ಹೊರಗಡೆ ಇಟ್ಟಿದ್ದಾರು.
ಮಧ್ಯಾಹ್ನ 1.30ರ ಸುಮಾರಿಗೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗ ಧಗನೆ ಉರಿಯಲಾರಂಭಿಸಿದೆ. ಕೂಡಲೇ ಸ್ಥಳೀಯರು ಸೇರಿ ಕಾರಿಗೆ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಕಾರು ಸಂಪೂರ್ಣ ಹಾನಿಯಾಗಿದೆ.
ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದು, ಕೂಡಲೇ ಗ್ಯಾರೇಜ್ನಲ್ಲಿ ಬೆಂಕಿ ಹತ್ತಿಕೊಂಡ ಕಾರಿನ ಬದಿಯಲ್ಲಿದ್ದ ಕೆಲ ಕಾರುಗಳನ್ನು ತೆರವುಗೊಳಿಸಿದ್ದಾರೆ ಆದರೂ ಒಂದು ಕಾರಿಗೆ ಬೆಂಕಿ ತಗಲಿ ಹಾನಿಯಾಗಿದೆ.