
ಬಸ್ಸು ಮತ್ತು ರಿಕ್ಷಾದ ನಡುವೆ ಅಪಘಾತ: ಓರ್ವ ಮೃತ್ಯು: ಹಲವರಿಗೆ ಗಾಯ
ಪಡುಬಿದ್ರಿ: ನಂದಿಕೂರು ಅಡ್ವೆ-ಕಾಂಜರಕಟ್ಟ ಬಳಿ ಬಸ್ಸು ಮತ್ತು ರಿಕ್ಷಾದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಅಡ್ವೆ ಗಣಪತಿ ದೇಗುಲದ ಬಳಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಕಾರ್ಕಳದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಪದ್ಮಾಂಬಿಕಾ ಬಸ್ಸು ಮತ್ತು ಪಕ್ಕದ ತಿರುವಿನಿಂದ ಬಂದ ರಿಕ್ಷಾವೊಂದು ಅಡ್ಡ ಬಂದಾಗ ಬಸ್ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನಿಯಂತ್ರಣ ಕಳೆದು ಕೊಂಡು ರಸ್ತೆ ಪಕ್ಕ ನಿಂತಿದೆ. ಬಸ್ಸು ಪಕ್ಕದ ಕಮರಿಗೆ ಬಿದ್ದಿದ್ದರೆ ದೊಡ್ಡ ಅನಾಹುತ ಆಗುವುದು ತಪ್ಪಿದೆ.
ರಿಕ್ಷಾದಲ್ಲಿ ಉತ್ತರ ಭಾರತ ಮೂಲಕ ಕಾರ್ಮಿಕರಿದ್ದು, ಓರ್ವ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೂವರನ್ನು ಕಾರ್ಕಳ ಆಸ್ಪತ್ರೆಗೆ ಸಾಗಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಪಘಾತದ ಕಾರಣ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿ ಮಾಹಿತಿ ಲಭಿಸಿಲ್ಲ.