
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
Thursday, June 12, 2025
ಶಿರ್ವ: ಶಿರ್ವ ನ್ಯಾರ್ಮದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜ್ಯೋತಿ ಉದಯಕುಮಾರ್ ಹೆಗ್ಡೆ (55) ಆತ್ಮಹತ್ಯೆ ಮಾಡಿಕೊಂಡವರು.
ಮಂಗಳವಾರ ಬೆಳಗ್ಗೆ ಪತಿ ಗದ್ದೆ ಕಡೆಗೆ ಹೋಗಿ 8 ಗಂಟೆ ಸುಮಾರಿಗೆ ಮನೆಗೆ ಬಂದು ಪತ್ನಿಯನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆಸುಪಾಸು ಹುಡುಕಿದಾಗ ಮನೆಯ ಬಾವಿಯ ಬಳಿ ಅವರ ಚಪ್ಪಲಿ ಪತ್ತೆಯಾಗಿತ್ತು. ಬಾವಿಗೆ ಇಣಿಕಿ ನೋಡಿದಾಗ ಬಾವಿಯಲ್ಲಿ ಪತ್ನಿ ಮುಳುಗಿರುವುದು ಕಂಡು ಬಂದಿದೆ. ತಕ್ಷಣ ಸ್ಥಳೀಯರಿಗೆ ತಿಳಿಸಿ ಅಗ್ನಿಶಾಮಕ ದಳಕ್ಕೆ ಕರೆಮಾಡಿ ನೀರಿನಲ್ಲಿ ಮುಳುಗಿದ್ದ ಮಹಿಳೆಯನ್ನು ಮೇಲೆತ್ತಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ವೈದ್ಯರು ಪರೀಕ್ಷಿಸಿ ಆಕೆ ಆಗಲೇ ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.
ಮಹಿಳೆಯ ಪುತ್ರ ಆಯುಷ್ ಉದಯ ಹೆಗ್ಡೆ ನೀಡಿರುವ ದೂರಿನಂತೆ ಶಿರ್ವ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.