ಗುಡ್ಡಕುಸಿತದಿಂದ ಹಾನಿ-ರೂ.5.70 ಲಕ್ಷ ಪರಿಹಾರ ವಿತರಣೆ

ಗುಡ್ಡಕುಸಿತದಿಂದ ಹಾನಿ-ರೂ.5.70 ಲಕ್ಷ ಪರಿಹಾರ ವಿತರಣೆ

ಪುತ್ತೂರು; ಈ ಬಾರಿಯ ಮಳೆಯ ಆರಂಭದಲ್ಲಿ ಮಳೆಯ ತೀವ್ರತೆಯಿಂದ 82 ಮನೆಗಳು ಭಾಗಶ; ಹಾನಿಗೊಳಗಾಗಿದ್ದು, ಈ ಮನೆಗಳಿಗೆ ತಲಾ ರೂ.6500ನಂತೆ ಒಟ್ಟು ರೂ.533000 ಪ್ರಾಕೃತಿಕವಿಕೋಪ ಹಿನ್ನಲೆಯಲ್ಲಿ ಪರಿಹಾರವನ್ನು ಪುತ್ತೂರು ತಹಶೀಲ್ದಾರ್ ನಾಗರಾಜ್ ಅವರು ವಿತರಣೆ ಮಾಡಿದ್ದಾರೆ.

ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿತ್ತು. ತಾಲೂಕಿನಲ್ಲಿ 3 ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿ ತಲಾ 3000 ವಿತರಣೆ ಮಾಡಲಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸೇರಿದ ದನವೊಂದು ಗುಡ್ಡ ಕುಸಿತಕ್ಕೆ ಬಲಿಯಾಗಿತ್ತು. ಇದಕ್ಕೆ ರೂ.37 ಸಾವಿರ ಪರಿಹಾರ ನೀಡಲಾಗಿದೆ. ತಾಲೂಕಿನಲ್ಲಿ 22 ಬೆಳೆಹಾನಿ ಪ್ರಕರಣಗಳ ವರದಿಯಾಗಿದ್ದು, ಶೇ೩೩ಕ್ಕಿಂತ ಹೆಚ್ಚು ಬೆಳೆಹಾನಿಯಾದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡಲು ಅವಕಾಶವಿದ್ದು, ಈ ಹಿನ್ನಲೆಯಲ್ಲಿ ಈ ಪ್ರಕರಣಗಳನ್ನು ಪರಿಶೀಲನೆಗೆಗಾಗಿ ತೋಟಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ. ಇಲಾಖೆಯಿಂದ ಪರಿಶೀಲನಾ ವರದಿ ಬಂದ ಬಳಿಕ ಪರಿಹಾರ ನೀಡಲಾಗುವುದು. ಗುಡ್ಡ ಕುಸಿತದಿಂದ 39 ಪ್ರಕರಣಗಳಲ್ಲಿ ಮನೆಗಳಿಗೆ ತೀವ್ರಹಾನಿ ಎಂದು ದಾಖಲಿಸಲಾಗಿದ್ದು, ಈ ಸಂಬಂಧ ಪರಿಶೀಲನೆಯ ನಂತರ ಪರಿಹಾರಧನ ವಿತರಣೆ ನಡೆಸಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ರೂ.5.70900 ಪರಿಹಾರಧನವನ್ನು ವಿತರಣೆ ಮಾಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article