
ಭಾರತೀಯ ವಾಯುಪಡೆಗೆ ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಆಯ್ಕೆ
Monday, June 30, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿಎಸ್ಸಿ ವಿಭಾಗದ ವಿದ್ಯಾರ್ಥಿಯಾಗಿರುವ ಕೆಡೆಟ್ ಮಂಜುನಾಥ್ ಟಿ.ವಿ. ಅವರು ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕರಾಗಿ ಸೇವೆ ಸಲ್ಲಿಸಲು ಜುಲೈ ತಿಂಗಳ 1ನೇ ತಾರೀಕಿನಂದು ಬೆಂಗಳೂರಿನ ಮಿಲಿಟರಿ ತರಬೇತಿ ಕೇಂದ್ರಕ್ಕೆ ಹಾಜರಾಗುವ ಮೂಲಕ ತನ್ನ ಕನಸನ್ನು ನನಸಾಗಿಸಲಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶಿಕ್ಷಕರಾಗಿರುವ ವೆಂಕಟೇಶ ಟಿ.ಜೆ. ಮತ್ತು ರಾಧಮಣಿ ಜಿ.ಆರ್. ದಂಪತಿಯ ಪುತ್ರರಾಗಿರುವ ಮಂಜುನಾಥ್ ಟಿ.ವಿ. 2013 ರಿಂದ ಹಲವಾರು ಭಾರತಿಯ ಸೈನ್ಯದ ಹಲವಾರು ವಿಭಾಗದ ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗವಸಿದ್ದರು. ಅಂತಿಮವಾಗಿ ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕರಾಗಿ ಆಯ್ಕೆಗೊಂಡ ಸಲುವಾಗಿ ಕಾಲೇಜಿನ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು. ಮಂಜಿನಾಥ್‌ರವರು 2025ರ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ಮಿಲಿಟರಿ ತರಬೇತಿ ಕೇಂದ್ರಕ್ಕೆ ಹಾಜರಾಗಲಿರುವರು.
ಅಭಿನಂದನಾ ಕಾರ್ಯದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ದೇಶ ಸೇವೆ ಎಂಬುದು ಒಂದು ಮಹತ್ಕಾರ್ಯ. ಹೇಗೆ ಒಬ್ಬ ಸನ್ಯಾಸಿ ತನ್ನ ಕುಟುಂಬವನ್ನು ತ್ಯಜಿಸಿ ಸನ್ಯಾಸಿ ಜೀವನವನ್ನು ಜೀವನ ನಡೆಸುತ್ತಾನೋ ಅದೇ ರೀತಿ ಸೈನಿಕರು ತಮ್ಮ ಕುಟುಂಬವನ್ನು ತ್ಯಜಿಸಿ ದೇಶ ಸೇವೆ ಮಾಡುವ ಮೂಲಕ ತನ್ನ ಅಮೂಲ್ಯ ಜೀವವನ್ನು ನೀಡಲು ಸಿದ್ಧರಾಗಿರುತ್ತಾರೆ. ದೇವರ ಆಶೀರ್ವಾದದ ಜೊತೆಗೆ ಹೆತ್ತವರ ಆಶೀರ್ವಾದ ಅತೀ ಮುಖ್ಯ ಎಂದು ಹೇಳಿ ಕೆಡೆಟ್ ಮಂಜುನಾಥ್ ಟಿ.ವಿ.ಯ ಹೆತ್ತವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ ಕೆಡೆಟ್ ಮಂಜುನಾಥ್ ಟಿ.ವಿ ಅವರಿಗೆ ಶುಭಕೋರಿದರು.
ಕಾಲೇಜಿನ ಉಪಪ್ರಾಶುಪಾಲರಾದ ಡಾ. ವಿಜಯ ಕುಮಾರ್ ಎಂ. ಮಾತನಾಡಿ. ಈಗಿನ ಪ್ರಪಂಚದಲ್ಲಿ ಭಾರತೀಯ ಸೈನ್ಯಕ್ಕೆ ಯುವಕ ಯುವತಿಯರು ಸೇರ್ಪಡೆಗೊಳ್ಳುತ್ತಿರುವುದು ಕಡಿಮೆ ಆಗುತ್ತಿದೆ ಕಾರಣ ಕಷ್ಟಪಡಲು, ಕಡಿಮೆ ವೇತನ, ಹೆತ್ತವರ ಪ್ರೋತ್ಸಹ ಇತ್ಯಾದಿ. ಆದರೆ ಡೆಟ್ ಮಂಜುನಾಥ್ ಟಿ.ವಿ. ಹಲವಾರು ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗವಸಿ ಆಯ್ಕೆಆಗದಿದ್ದರೂ ದೃತಿಗೆಡದೆ ತನ್ನ ಪರಿಶ್ರಮದಿಂದ ಭಾರತೀಯ ವಾಯುಪಡೆಗೆ ಆಯ್ಕೆಯಾಗಿರುವುದು ಕಾಲೇಜಿಗೆ, ಊರಿಗೆ, ಹಾಗೂ ತನ್ನ ಹೆತ್ತವರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿ ಅವರಿಗೆ ಶುಭಕೋರಿದರು.
ಅಭಿನಂದನಾ ಕಾರ್ಯದಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ, ಹಣಕಾಸು ಅಧಿಕಾರಿ ಡಾ. ಎಡ್ವಿನ್ ಡಿಸೋಜಾ, ಶೈಕ್ಷಣಿಕ ಉಪಕುಲಸಚಿವರಾಧ ವಿಪಿನ್ ನಾಯ್ಕ್, ಪರೀಕ್ಷಾಂಗ ಉಪಕುಲಸಚಿವರಾದ ಅಭಿಷೇಕ್ ಸುವರ್ಣ, ಐಕ್ಯೂಎಸಿ ಸಂಯೋಜಕಿ ಡಾ. ಮಾಲಿನಿ ಕೆ. ಜೊತೆಗೆ ಕಾಲೇಜಿನ ಶಿಕ್ಷಕ ಮತ್ತು ಆಡಳಿತ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಸಿದರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಜೋನ್ಸನ್ ಡೇವಿಡ್ ಸಿಕ್ವೇರಾ ಅಭಿನಂದನಾ ಕಾರ್ಯಕ್ರಮವನ್ನು ನಿರೂಪಿಸಿದರು.