
ಕುಕ್ಕೆಯಲ್ಲಿ ನಿರಂತರ ಮಳೆ
Monday, June 16, 2025
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬರುತ್ತಿದ್ದು ಸ್ಥಾನಘಟ್ಟದ ಪಕ್ಕ ಉಕ್ಕಿ ಹರಿಯುತ್ತಿದೆ.
ಮಳೆ ವಿರಾಮ ಇಲ್ಲದೆ ನಿರಂತರವಾಗಿ ರಾತ್ರಿಯಿಂದಲೇ ಸುರಿಯುತ್ತಿದೆ. ಕುಮಾರಧಾರ ಸ್ಥಾನಗಟ್ಟದಲ್ಲಿ ಪವಿತ್ರ ತೀರ್ಥ ಸ್ನಾನಕ್ಕಾಗಿ ತೆರಳುತ್ತಿರುವ ಭಕ್ತಾದಿಗಳಿಗೆನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕುಕ್ಕೆ ದೇವಳದ ವತಿಯಿಂದ ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ.