ಸುಬ್ರಹ್ಮಣ್ಯ: ಪ್ರಯಾಣಕ್ಕೆ ಬಸ್ ಅಲಭ್ಯಕ್ಕೆ ರೊಚ್ಚಿಗೆದ್ದ ಪ್ರಯಾಣಿಕರು-ಬಸ್‌ಗಳ ಪ್ರಯಾಣಕ್ಕೆ ಬ್ಯಾರಿಕೇಡ್ ಅಡ್ಡ ಇಟ್ಟು ದಿಗ್ಬಂಧನ ವಿಧಿಸಿದ ಯಾತ್ರಿಕರು

ಸುಬ್ರಹ್ಮಣ್ಯ: ಪ್ರಯಾಣಕ್ಕೆ ಬಸ್ ಅಲಭ್ಯಕ್ಕೆ ರೊಚ್ಚಿಗೆದ್ದ ಪ್ರಯಾಣಿಕರು-ಬಸ್‌ಗಳ ಪ್ರಯಾಣಕ್ಕೆ ಬ್ಯಾರಿಕೇಡ್ ಅಡ್ಡ ಇಟ್ಟು ದಿಗ್ಬಂಧನ ವಿಧಿಸಿದ ಯಾತ್ರಿಕರು


ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಮತ್ತಿತರ ಕಡೆಯ ಪ್ರಯಾಣಕ್ಕೆ ಬಸ್ ಅಲಭ್ಯವಾಗಿ ಅಕ್ರೋಶಿಶಿತರಾಗಿ ಪ್ರಯಾಣಿಕರು ಬಸ್‌ಗಳ ಪ್ರಯಾಣಕ್ಕೆ ದಿಗ್ಬಂಧನ ಹಾಕಿ, ಬ್ಯಾರಿಕೇಡ್ ಎಳೆದು ಅಡ್ಡ ಇಟ್ಟು ಬಸ್‌ಗಳ ಸಂಚಾರಕ್ಕೆ ತಡೆಯುಂಟು ಮಾಡಿದ್ದು, ಪೊಲೀಸರ ಆಗಮನದ ಬಳಿಕ ಪ್ರಯಾಣಿಕರನ್ನು ಚಧುರಿಸಿದ ಮತ್ತು ಬಸ್ ವ್ಯವಸ್ಥೆ ಮಾಡಿ ಪ್ರಕರಣ ಸುಖಾಂತ್ಯವಾದ ಘಟನೆ ಜೂ.15 ರಂದು ವರದಿಯಾಗಿದೆ.

ಸುಬ್ರಹ್ಮಣ್ಯಕ್ಕೆ ಭಾನುವಾರ ಅಪಾರ ಯಾತ್ರಿಕರೂ ಬಂದಿದ್ದು ಅಪಾರ ಯಾತ್ರಿಕರೂ ಬಸ್ ತಂಗುದಾಣಕ್ಕೆ ಬಂದಿದ್ದರು. ತಂಗುದಾಣದಲ್ಲಿ ಬೆಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ ಹತ್ತಿಸಿದರು ಎನ್ನಲಾಗಿದೆ. ಆದರೆ ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಹೋಗುವ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಇಲ್ಲದಾಗಿತ್ತು. ಇದರಿಂದ ಅಕ್ರೋಶಗೊಂಡ ಪ್ರಯಾಣಿಕರು ಅಲ್ಲೇ ಹತ್ತಿರದಲ್ಲಿದ್ದ ಪೊಲೀಸ್ ಬ್ಯಾರಿಕೇಡ್‌ನ್ನು ರಸ್ತೆಗೆ ಅಡ್ಡ ಇಟ್ಟು ಯಾವುದೇ ಬಸ್ ಹೋಗದಂತೆ ತಡೆದರೆನ್ನಲಾಗಿದೆ.  ಇದನ್ನು ಮನಗಂಡ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅವರು ಬಂದು ಗುಂಪು ಗೂಡಿದ್ದ ಯಾತ್ರಿಕರನ್ನು ಚದುರಿಸದರೆನ್ನಲಾಗಿದೆ. ಬ್ಯಾರಿಕೇಡ್ ತೆಗೆದು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

ಈ ಬಗ್ಗೆ ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬಳಿ ವಿಚಾರಿಸಿದಾಗ ಬೆಂಗಳೂರಿಗೆ ಹೋಗುವ ಒಂದು ಬಸ್ ಕೆಟ್ಟಿದ್ದು ಪ್ರಯಾಣಿಕರಿಗೆ ತೊಂದರೆ ಉಂಟಾಯ್ತು.  ಸುಳ್ಯ ಡಿಪೋದಿಂದ ಮೆಕಾನಿಕ್ ಬಂದು ಬಸ್ ರಿಪೇರಿ ಮಾಡಿದ ಮೇಲೆ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಯಿತು ಎಂದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article