
ಕಲ್ಲಿನ ಕೋರೆಯಲ್ಲಿ ಯುವಕನ ಶವ ಪತ್ತೆ
ಬಂಟ್ವಾಳ: ಶನಿವಾರ ಬಿ.ಸಿ. ರೋಡಿಗೆ ಔಷಧ ತರಲೆಂದು ಹೋಗಿದ್ದ ಯುವಕನೋರ್ವನ ಮೃತದೇಹ ಬೆಂಜನಪದವಿನ ಬಳಿರುವ ಕಲ್ಲಿನಕೋರೆಯ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ.
ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಂಬಳ ನಿವಾಸಿ ಸಾಗರ್ (28) ಎಂದು ಗುರುತಿಸಲಾಗಿದೆ.
ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು ಈತ ಶನಿವಾರ ಸ್ನೇಹಿತನೊಂದಿಗೆ ಔಷಧವನ್ನು ಪಡೆಯಲೆಂದು ಆಟೋದಲ್ಲಿ ಬಿ.ಸಿ.ರೋಡಿಗೆ ಹೋಗಿದ್ದು, ವಾಪಸ್ಸು ಬಂದಾತ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಆಟೋರಿಕ್ಷಾ ಇಳಿದು ಹೋದಾತ ಮನೆಗೆ ಬಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಬಂಧಿಕರಲ್ಲಿ ವಿಚಾರಿಸಿದಾಗ ಈತನ ಸುಳಿವು ಸಿಗದಿದ್ದು, ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸೋಮವಾರ ಬೆಳಗ್ಗೆ ಸ್ಥಳೀಯ ನಿವಾಸಿ ಸುರೇಶ್ ಎಂಬವರು ವಿದ್ಯಾನಗರ ರಸ್ತೆಯ ಹೈಸ್ಕೂಲ್ ರೋಡ್ ಎಂಬಲ್ಲಿ ಕಲ್ಲಿನಕೋರೆಯ ಹೊಂಡಲ್ಲಿ ಸಾಗರ್ ಶವ ತೇಲುತ್ತಿರವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.