ಸುಳ್ಯದಲ್ಲಿ ಆಧಾರ್ ಕೇಂದ್ರ ತೆರೆಯಲು ಸಂಸದರಿಗೆ ಮನವಿ

ಸುಳ್ಯದಲ್ಲಿ ಆಧಾರ್ ಕೇಂದ್ರ ತೆರೆಯಲು ಸಂಸದರಿಗೆ ಮನವಿ


ಸುಳ್ಯ: ಸುಳ್ಯ ನಗರದಲ್ಲಿ ಆಧಾರ್ ಕೇಂದ್ರ ಇಲ್ಲದೆ ಹೊಸ, ಆಧಾರ್ ಮಾಡಲು, ತಿದ್ದುಪಡಿ, ಅಪ್‌ಡೇಷನ್ ಮಾಡಲು ಸಾಧ್ಯವಾಗದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದುದರಿಂದ ಸುಳ್ಯದಲ್ಲಿ ಕೂಡಲೇ ಆಧಾರ್ ಕೇಂದ್ರ ತೆರಯಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಸಾರ್ವಜನಿಕರು  ಮನವಿ ಸಲ್ಲಿಸಿದ್ದಾರೆ.

ಆಧಾರ್ ಕೇಂದ್ರ ಇಲ್ಲದೆ ಸುಳ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತೀವ್ರ ತೊಂದರೆ ಉಂಟಾಗಿದೆ, ಆದುದರಿಂದ ಕೂಡಲೇ ಆಧಾರ್ ಕೇಂದ್ರ ತೆರೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಸುಳ್ಯಕ್ಕೆ ಆಗಮಿಸಿದ ಸಂಸದರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಅರಂತೋಡು ಮುಖ್ಯ ಪೇಟೆಯ ಅಂಚೆ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್ ಕೇಂದ್ರವನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದರಿಂದ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ ಆದುದರಿಂದ ಅರಂತೋಡಿನಲ್ಲಿ ಆಧಾರ್ ಕೇಂದ್ರ ತೆರೆಯಬೇಕು ಎಂದು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. 

ಅರಂತೋಡಿನಲ್ಲಿ ಆಧಾರ್ ಕೇಂದ್ರ ತೆರೆದರೆ ಸಂಪಾಜೆ, ಮರ್ಕಂಜ, ಅರಂತೋಡು ಗ್ರಾಮದ ಗ್ರಾಮಸ್ಮರಿಗೆ ತುಂಬಾ ಸಹಾಯಕವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಹರೀಶ್ ಕಂಜಿಪಿಲಿ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ ಮತ್ತಿತರರು ಸೇರಿ ಮನವಿ ಸಲ್ಲಿಸಿದರು. ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸಾರ್ವಜನಿಕರು ಸಂಸದರಿಗೆ ಮನವಿ ಸಲ್ಲಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article