ಶಾಲೆಗೆ ಹುಸಿ ಬಾಂಬ್ ಕರೆ ಪ್ರಕರಣ: ಮಹಿಳೆಯ ಬಂಧನ

ಶಾಲೆಗೆ ಹುಸಿ ಬಾಂಬ್ ಕರೆ ಪ್ರಕರಣ: ಮಹಿಳೆಯ ಬಂಧನ

ಉಡುಪಿ: ಇಲ್ಲಿನ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಕರೆ ಬಂದಿರುವ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಚೆನ್ನೈ ಮೂಲದ ಮಹಿಳೆಯೊಬ್ಬರನ್ನು ಅಹಮದಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆಕೆಯೇ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗುತ್ತಿದೆ.

ಆಕೆಯನ್ನು ವಶಕ್ಕೆ ನೀಡುವಂತೆ ಈಗಾಗಲೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪತ್ರ ಬರೆದಿದ್ದು, ಅಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ ಉಡುಪಿಗೆ ಹಸ್ತಾಂತರವಾಗುವ ಸಾಧ್ಯತೆ ಇದೆ.

ಕಳೆದ ವರ್ಷವೂ ನಗರದ ಭಾಗದಲ್ಲಿರುವ ಇನ್ನೊಂದು ವಿದ್ಯಾಸಂಸ್ಥೆಯೊಂದಕ್ಕೆ ಇದೇ ರೀತಿ ಹುಸಿ ಬಾಂಬ್ ಮೈಲ್ ಬಂದಿದ್ದು, ಅದರಲ್ಲಿಯೂ ಈಕೆಯ ಕೈವಾಡ ಇದೆಯೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article