
ಕಾರ್ಮಿಕನಿಗೆ ಒಂಟಿ ಕಾಲಿನ ಶಿಕ್ಷೆ: ಕಠಿಣ ಕ್ರಮಕ್ಕೆ ಆಗ್ರಹ
Thursday, June 19, 2025
ಉಡುಪಿ: ಬ್ರಹ್ಮಾವರ ಸಮೀಪದ ವಂಡಾರಿನ ಗೇರುಬೀಜ ಕಾರ್ಖಾನೆಯೊಂದರಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದ ಶಿರೂರು ಗ್ರಾಮದ ಪ್ರವೀಣ್ ಎಂಬಾತನಿಗೆ ಕಾರ್ಖಾನೆ ಗೇಟ್ ಬಳಿ ಅಮಾನವೀಯವಾಗಿ ಒಂಟಿ ಕಾಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದ್ದು, ಕಾರ್ಖಾನೆ ಮಾಲಿಕ ಸಂಪತ್ ಶೆಟ್ಟಿಯ ಈ ವರ್ತನೆಯನ್ನು ಸಿಐಟಿಯು ಖಂಡಿಸಿದೆ.
ಕೆಲಸದ ಸಮಸ್ಯೆ ಏನೇ ಇದ್ದರೂ ತನ್ನದೇ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನೊಂದಿಗೆ ಮಾತುಕತೆ ಮಾಡಿ ಮುಂದೆ ಇಂಥ ತಪ್ಪು ಮರುಕಳಿಸದಂತೆ ಎಚ್ಚರಿಕೆ ನೀಡಿ ಬಗೆಹರಿಸುವ ಬದಲು ಅಮಾನವೀಯ ಶಿಕ್ಷೆ ವಿಧಿಸಿರುವುದು ಸರಿಯಲ್ಲ. ಈ ಪ್ರಕರಣವನ್ನು ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆಗೊಳಪಡಿಸಿ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದ್ದಾರೆ.