ರಾಜಕೇಸರಿ ಸಂಘಟನೆಯಿಂದ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

ರಾಜಕೇಸರಿ ಸಂಘಟನೆಯಿಂದ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ


ಉಜಿರೆ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ವತಿಯಿಂದ ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 560ನೇ ಸೇವಾ ಯೋಜನೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಕುದ್ಯಾಡಿಯ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮ ಜೂ.19 ರಂದು ನಡೆಯಿತು.

ಮಕ್ಕಳಿಗೆ ಬ್ಯಾಗುಗಳನ್ನು ವಿತರಿಸಿ ಮಾತನಾಡಿದ ಪತ್ರಕರ್ತ ದೀಪಕ್ ಆಠವಳೆ ಅವರು, ಸರಕಾರಿ ಶಾಲೆಯನ್ನು ಉಳಿಸುವತ್ತ ಹಲವಾರು ಸ್ವಯಂಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ತಾಲೂಕಿನಲ್ಲಿ ರಾಜಕೇಸರಿ ಸಂಘಟನೆಯು ಸದ್ದು ಗದ್ದಲವಿಲ್ಲದೆ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಪೋಷಕರ, ಶಿಕ್ಷಕರ ಹಾಗೂ ಶಾಲಾ ಆಡಳಿತ ಮಂಡಳಿ ಸೂಕ್ತ ಚಿಂತನೆ ನಡೆಸಿದರೆ ಸರಕಾರಿ ಶಾಲೆಯನ್ನು ಸ್ವಯಂಸೇವಾ ಸಂಸ್ಥೆಗಳ ಬೆಂಬಲದಿಂದ ಮುಂದುವರಿಸಿಕೊಂಡು ಹೋಗಬಹುದು ಎಂದರು.

ಈ ಸಂದರ್ಭದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ಸಂಚಾಲಕ ಜಗದೀಶ್ ಲಾಯಿಲ, ಕ್ರೀಡಾಕಾರ್ಯದರ್ಶಿ ದೇವರಾಜ್, ಸ್ಥಳೀಯ ಮುಖಂಡರಾದ ಲೋಕೇಶ್ ಕುದ್ಯಾಡಿ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ನಾಗಭೂಷಣ ಸ್ವಾಗತಿಸಿ, ಅತಿಥಿ ಶಿಕ್ಷಕಿ ರೇಖಾ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article