
ಕಾವಳಪಡೂರು: ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ
ಬಂಟ್ವಾಳ: ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ರೈತರ ಅರಿವು ಮೂಡಿಸುವ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಕೃಷಿ ಇಲಾಖೆ ಬಂಟ್ವಾಳ ಹಾಗೂ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಜಂಟಿ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾವಳಪಡೂರು ಗ್ರಾಮಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿ ಅಧಿಕಾರಿ ನಂದನ್ ಶೆಣೈ ಅವರು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಕುರಿತು ಮಾಹಿತಿ ನೀಡಿದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರದೀಪ್ ಡಿ’ಸೋಜರವರು ತೋಟಗಾರಿಕಾ ಇಲಾಖಾ ಸೌಲಭ್ಯಗಳ ಹಾಗೂ 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಕುರಿತು ಮಾಹಿತಿ ನೀಡಿದರು.ಪಾಣೆಮಂಗಳೂರು ಹೋಬಳಿ ಆತ್ಮಯೋಜನೆ ಎಟಿಯಂ ಹನಮಂತ ಕಾಳಗಿ ಅವರು 2025-26ನೇ ಸಾಲಿನ ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿದರು.
ಕಾವಳಪಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ಗೌಡ, ಬಂಟ್ವಾಳ ತಾಲೂಕು ಎನ್‌ಆರ್‌ಎಲ್‌ಎಮ್ ಮಹಿಳಾ ರೈತ ಉತ್ಪಾದಕ ಕಂಪೆನಿಯ ಸಿಇಓ ನವ್ಯ ಹೊಳ್ಳ, ಕಾವಳಪಡೂರು ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರಾದ ಜಿನರಾಜ ಅರಿಗ, ಕಾವಳಪಡೂರು ಎನ್‌ಎಮ್‌ಎನ್‌ಎಫ್ ಯೋಜನೆಯ ಬಿಆರ್‌ಸಿ ಉದಯ್ ಶೆಟ್ಟಿ ಬೊಂಡಾಲ, ಎನ್‌ಎಮ್‌ಎನ್‌ಎಫ್ ಸಿಆರ್‌ಪಿಗಳಾದ ದೀಕ್ಷಿತ್, ದಯಾವತಿ, ಪ್ರವೀಣ್ ನಾಯ್ಕ್, ವೀಣಾ ಡಿ’ಸೋಜ ಕಾವಳಪಡೂರು ಕೃಷಿ ಸಖಿ ಚೈತ್ರ, ಕಾವಳಮೂಡೂರು ಕೃಷಿ ಸಖಿ ಸುಲೋಚನಾ ಉಪಸ್ಥಿತರಿದ್ದರು.
ಕಾವಳಪಡೂರು ಪ್ರಾ.ಕೃ.ಪ.ಸ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಸ್ವಾಗತಿಸಿ, ಬಂಟ್ವಾಳ ತಾಲೂಕು ಆತ್ಮ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.