
ಬೀಗ ಮುರಿದ ನಗದು ಕಳವು
ಬಂಟ್ವಾಳ: ಮನೆಯೊಂದರ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಅಲ್ಲೇ ಮದ್ಯ ಸೇವನೆಗೈದು ಬಳಿಕ ಬೆಡ್ ರೂಂ.ನ ಕಪಾಟಿನ ಬೀಗ ತೆರದು ನಗದು ದೋಚಿ ಪರಾರಿಯಾದ ಘಟನೆತಾಲೂಕಿನ ಸರಪಾಡಿ ಗ್ರಾಮದ ದರ್ಖಾಸು ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಅಜಿತ್ ಅವರ ಮನೆಯಲ್ಲಿಈಕಳವು ನಡೆದಿದೆ. ಇವರು ಜು.24 ರಂದು ರಾತ್ರಿ ತಾನು ವಾಸಿಸುವ ಬಾಡಿಗೆ ಮನೆಯ ಮುಂಭಾಗಿಲಿಗೆ ಬೀಗವನ್ನು ಹಾಕಿ ಸರಪಾಡಿಯಲ್ಲಿರುವ ಸ್ವಂತ ಮನೆಗೆ ತೆರಳಿದ್ದರು.
ಮರುದಿನ ಅಂದರೆ ಜು.25 ರಂದು ಸಂಜೆ ಬಾಪಾಸ್ ತನ್ನ ಬಾಡಿಗೆ ಮನೆಗೆ ಬಂದಾಗ, ಮನೆಯ ಬಾಗಿಲಿಗೆ ಹಾಕಿದ ಬೀಗವು ಇರಲಿಲ್ಲ, ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಮನೆಯ ಹಾಲ್‌ನಲ್ಲಿ ನಾಲ್ಕು ಖಾಲಿ ಬಿಯರ್ ಬಾಟಲ್ ಇರುವ ಕಂಡುಬಂದಿದೆ.
ಅನುಮಾನಗೊಂಡ ಅವರು, ಮಲಗುವ ಕೋಣೆಗೆ ಹೋಗಿ ನೋಡಿದಾಗ ಅಲ್ಲಿದ್ದ ಗೊಡ್ರೇಜ್ ಕಪಾಟಿನ ಬಾಗಿಲು ತೆರೆದಿದ್ದು, ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಬಿದ್ದಿದ್ದು, ಕಳ್ಳರು ಕಪಾಟಿನ ಬೀಗ ಮುರಿದು ಅದರಲ್ಲಿದ್ದ 18,500 ರೂ.ವನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.