ಸಾಲ ಕೇಳಿದ ಕೋಪಕ್ಕೆ ಜಾಹೀರಾತು ಫಲಕಕ್ಕೆ ಬೆಂಕಿ: ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಸಾಲ ಕೇಳಿದ ಕೋಪಕ್ಕೆ ಜಾಹೀರಾತು ಫಲಕಕ್ಕೆ ಬೆಂಕಿ: ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು


ಬೆಳ್ತಂಗಡಿ: ಅಂಗಡಿಯ ಎದುರಿನಲ್ಲಿರಿಸಿದ ಜಾಹೀರಾತು ಫಲಕಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ದಿನಸಿ  ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಫಲಕದ ಬ್ಯಾನರ್ ಗೆ  ಜುಲೈ 10 ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ವ್ಯಕ್ತಿಯೊರ್ವ ಬೆಂಕಿ ಹಚ್ಚಿ  ಓಡಿಹೋಗಿದ್ದ. ಅಂಗಡಿಯವರು  ಬೆಳಗ್ಗೆ  ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಕ್ಯಾಮರ ಪರಿಶೀಲನೆ ನಡೆಸಿದಾಗ ಕೃತ್ಯದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಂಗಡಿ ಮಾಲೀಕರು ದೂರು ನೀಡಿದ್ದು. ಪೊಲೀಸರು ಪ್ರಕರಣ ದಾಖಲಿಸಿದ್ದರು.

ಬೆಂಕಿ ಹಚ್ಚಿದ ಆರೋಪಿ ಬೆಳ್ತಂಗಡಿ ತಾಲೂಕಿನ ಬಳಂಜದ  ನಿವಾಸಿಯಾಗಿದ್ದು, ಬೆಳ್ತಂಗಡಿ ಪೊಲೀಸರು ಜುಲೈ 10 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹಿಂದೆ ಆರೋಪಿ ಹೊಟೇಲ್ ನಡೆಸುತ್ತಿದ್ದು‌‌. ಇದೆ ಅಂಗಡಿಯಿಂದ ಸಾಲವಾಗಿ  ದಿನಸಿ ಸಾಮಾಗ್ರಿ  ಖರೀದಿಸಿದ ಹಣ ಬಾಕಿ ಇತ್ತು. ಈ ಹಣವನ್ನು ಅಂಗಡಿ ಮಾಲೀಕ ಜುಲೈ 9 ರಂದು ಕರೆ ಮಾಡಿ  ಕೊಡುವಂತೆ ಕೇಳಿದ್ದರು. ಇದರಿಂದ  ಕೋಪಗೊಂಡು ಬೆಂಕಿ ಹಚ್ಚಿರುವುದಾಗಿ ಆರೋಪಿ  ತನಿಖೆ ವೇಳೆ ಒಪ್ಪಿಕೊಂಡಿದ್ದು ಬೇರೆ ಯಾವುದೇ ಉದ್ದೇಶದಿಂದ ಅಲ್ಲ ಎಂದಿದ್ದಾನೆ. ಬೆಂಕಿ ಹಚ್ಚಿದಾಗ ಪಕ್ಕದಲ್ಲಿ ಕಾರು ನಿಲ್ಲಿಸಲಾಗಿದ್ದು ಅದಲ್ಲದೆ ಅಂಗಡಿಗೆ ಬೆಂಕಿ ತಗುಲದೆ ಯಾವುದೇ ದೊಡ್ಡ ಅನಾಹುತ ಉಂಟಾಗಿಲ್ಲ ಎಂದು ಅಂಗಡಿ  ಮಾಲೀಕ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article