
ಬಿಜೆಪಿ ವತಿಯಿಂದ ಗುರುವಂದನಾ ಕಾರ್ಯಕ್ರಮ
Thursday, July 10, 2025
ಮಂಗಳೂರು: ಗುರುಪೂರ್ಣಿಮೆಯಂದು ರಾಜ್ಯ ಪ್ರಶಸ್ತಿ ಹಾಗೂ ಶಾಂತಲಾ ಪ್ರಶಸ್ತಿ ವಿಜೇತರಾದ ನೃತ್ಯಗುರು ಕಲಾತಿಲಕ ವಿದ್ವಾನ್ ಶ್ರೀ ಮೋಹನ್ ಕುಮಾರ್ ಉಳ್ಳಾಲ್ ರವರನ್ನು ಕೊಲ್ಯದ ಅವರ ಸ್ವಗ್ರಹದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗೌರವಿಸಿ, ಸನ್ಮಾನಿಸಿದರು.
ಜಿಲ್ಲೆಯ ಕಾರ್ಯಕಾರಿಣಿ ಸದಸ್ಯರಾದ ಹರೀಶ್ ಅಂಬ್ಲಮೊಗರು, ಮಂಡಲ ಪ್ರಧಾನಕಾರ್ಯದರ್ಶಿ ದಯಾನಂದ ತೊಕ್ಕೋಟು, ಮಂಡಲ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೋಟು, ಮಂಡಲ ಕಾರ್ಯಕಾರಿಣಿ ಸದಸ್ಯರಾದ ಹರೀಶ್ಚಂದ್ರ, ಯುವ ಮೋರ್ಚಾ ಸದಸ್ಯರಾದ ದೀಕ್ಷಿತ್ ನಿಸರ್ಗ, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಫಿಕಾಡ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರಿಣಿ ಕೋಟ್ಯಾನ್, ಮಂಡಲ ಕಾರ್ಯದರ್ಶಿ ಕಿಶೋರ್ ಕುತ್ತಾರು, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ, ಸೋಮೇಶ್ವರ ಪುರಸಭೆ ಕೌನ್ಸಿಲರ್‌ಗಳಾದ ಜಯಪೂಜಾರಿ ಅನಿಲ್ ಕೊಲ್ಯ, ಸೋನಾ ಸುಭಾಷಿಣಿ, ಅಮಿತಾ ಸೋಮೇಶ್ವರ, ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ, ಶಕ್ತಿಕೇಂದ್ರ ಪ್ರಮುಖರಾದ ಚೇತನ್ ಶೆಟ್ಟಿ, ಶಿವ ಕುಮಾರ್ ಪೆರಿಯತ್ತೂರು, ರಾಜೇಶ್ ಕೊಲ್ಯ, ಕೃಷ್ಣ ಬಿ. ಮೊದಲಾದವರಿದ್ದರು.