
ಗುಡ್ಡ ಕುಸಿತ: ಸಂಚಾರ ಸ್ಥಗಿತ
Wednesday, July 23, 2025
ಕಾಸರಗೋಡು: ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ವೀರ ಮಲೆಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿರುವ ಘಟನೆ ಬುಧವಾರ ಬೆಳಗ್ಗೆ 10.30 ರ ಸುಮಾರಿಗೆ ನಡೆದಿದೆ.
ಗುಡ್ಡ ಕುಸಿಯುವ ಸಂದರ್ಭದಲ್ಲಿ ಹಲವು ವಾಹನಗಳು ರಸ್ತೆಯಲ್ಲಿ ತೆರಳುತ್ತಿತ್ತು. ಒಂದು ಕಾರು ಮಣ್ಣಿನಡಿ ಸಿಲುಕಿದರೂ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ತಿಂಗಳ ಹಿಂದೆಯೂ ಮಣ್ಣು ಕುಸಿ ದಿತ್ತು .ಇದರಿಂದ ದಿನಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.