ಸಿಗಂದೂರು ಬಾರ್ಜ್ ಸೇವೆ ಕುಂದಾಪುರಕ್ಕೆ: ಸಂಸದರ ಒಪ್ಪಿಗೆ

ಸಿಗಂದೂರು ಬಾರ್ಜ್ ಸೇವೆ ಕುಂದಾಪುರಕ್ಕೆ: ಸಂಸದರ ಒಪ್ಪಿಗೆ


ಕುಂದಾಪುರ: ಆರು ದಶಕಗಳಿಂದ ಕನಸಾದ ಸಿಗಂದೂರು ಸೇತುವೆ ನಿರ್ಮಾಣವಾಗಿ, ಇದೀಗ ಲೋಕಾರ್ಪಣೆಗೊಂಡಿದೆ. ಅಲ್ಲಿನ ಅಂಬಾರ ಕೊಡ್ಲು- ಕಳಸವಳ್ಳಿ ನಡುವೆ ಎರಡು ಕಿಲೋಮೀಟರ್ ದೂರ ನದಿ ದಾಟಲು ಇದ್ದಿದ್ದ ಲಾಂಚ್ ವ್ಯವಸ್ಥೆ ಸ್ಥಗಿತಗೊಂಡಿದೆ.

ಶ್ರೀ ಕ್ಷೇತ್ರ ಸಿಗಂದೂರು ಸಂಪರ್ಕಿಸಲು ಶರಾವತಿ ಹಿನ್ನಿರಿನಲ್ಲಿ ದೇಶದ ಎರಡನೇ ಅತಿ ಉದ್ದವಾದ ಕೇಬಲ್ ಸೇತುವೆ ನಿರ್ಮಾಣದ ನಂತರ ಅಲ್ಲಿ ಬಳಕೆಯಲ್ಲಿದ್ದ ಬಾರ್ಜ್ ಸೇವೆಯನ್ನು ಗಂಗೊಳ್ಳಿ-ಕುಂದಾಪುರ ನಡುವಿನ ಸಂಪರ್ಕಕ್ಕೆ ಬಳಸಬೇಕು ಎಂದು ಸಾರ್ವಜನಿಕರಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

ಸಿಗಂದೂರು ಸಂಪರ್ಕಕ್ಕೆ ಬಳಸುತ್ತಿದ್ದ ಬಾರ್ಜ್ ಅನ್ನು ಗಂಗೊಳ್ಳಿ-ಕುಂದಾಪುರ ನಡುವೆ ಸಂಪರ್ಕ ಕಲ್ಪಿಸಲು ಪಂಚಗಂಗಾವಳಿ ನದಿಗೆ ಒದಗಿಸಬೇಕು ಎಂದು ಸ್ಥಳೀಯರು ಹಲವು ರೀತಿಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಇದಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಗಂಗೊಳ್ಳಿ-ಕೋಡಿ ನಡುವಿನ ನದಿಯಲ್ಲಿ ಸದ್ಯದಲ್ಲೇ ಬಾರ್ಜ್ ಸಂಚಾರ ಆರಂಭಗೊಳ್ಳಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article