
ಕಿಡ್ನಿ ಜೋಡಣೆಗಾಗಿ ಸಾಯೀ ಮಾನಾ೯ಡ್ ಸೇ.ಸಂಘದಿಂದ ಧನ ಸಹಾಯ
Monday, July 21, 2025
ಮೂಡುಬಿದಿರೆ: ಬೆಳುವಾಯಿ ಗ್ರಾಮದ ಬರೋಣಿ ಪರಿಸರದ ಸಾಯಿನಾಥ್ ಸುವರ್ಣ (30ವರ್ಷ) ಎಂಬವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆಗಾಗಿ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ಸೇವಾ ಸಂಘದ 71ನೇ ಯೋಜನೆಯ ಜುಲೈ ತಿಂಗಳ 2ನೇ ಯೋಜನೆಯ ರೂ. 10,000 ಧನ ಸಹಾಯದ ನೆರವನ್ನು ನೀಡಿದೆ.
ಬೆಳುವಾಯಿ ಪರಿಸರದ ರಜನಿ ಎಂಬವರ ಹಿರಿಯ ಮಗ ನಾದ ಸಾಯಿನಾಥ್ ಸುವರ್ಣ ಎಂಬವರ 2ಕಿಡ್ನಿ ಯ ಸಮಸ್ಯೆಯಿದ್ದು ವೈದ್ಯರು 2 ಕಿಡ್ನಿಯನ್ನೂ ಬದಲಿಸಬೇಕೆಂದು ತಿಳಿಸಿರುತ್ತಾರೆ.
ಮಗನಿಗೆ 30ವರ್ಷ ಪ್ರಾಯದಲ್ಲೇ ಕಿಡ್ನಿ ಸಮಸ್ಯೆ ಕಾಣಿಸಿಕೊಂಡದ್ದರಿಂದ ದಿಕ್ಕು ತೋಚದಂತ್ತಾಗಿದೆ. ಇವರೆಗೆ ತಾಯಿ ಬೀಡಿ ಕಟ್ಟಿ ಖರ್ಚು ಮಾಡುತ್ತಿದ್ದಾರೆ. ಇವರ ಹಿರಿಯ ಮಗಳಿಗೆ ಮದುವೆಯಾಗಿದೆ. ಕೊನೆಯ ಮಗ ಆಳ್ವಾಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಇವರಿಗೆ ತಿಂಗಳಿಗೆ ಚಿಕಿತ್ಸೆಗೆ ಸುಮಾರು ಹಣ ಬೇಕಾಗಿರುವುದರಿಂದ ಹಾಗೂ ಕಿಡ್ನಿ ಸಿಕ್ಕರೆ ಜೋಡಣೆ ಮಾಡಲು ಹಣ ಬೇಕಾಗಿರುವುದರಿಂದ ಸಾಯೀ ಮಾನಾ೯ಡ್ ಸೇ. ಸಂಘವು ಭಾನುವಾರ ಆಥಿ೯ಕ ನೆರವು ನೀಡುವ ಮೂಲಕ ಸಹಕಾರ ನೀಡಿದೆ.