ಸಾಲಿಗ್ರಾಮ: ಬಿಜೆಪಿ ಸುಳ್ಳಿನ ವಿರುದ್ದ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ

ಸಾಲಿಗ್ರಾಮ: ಬಿಜೆಪಿ ಸುಳ್ಳಿನ ವಿರುದ್ದ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ

ಕುಂದಾಪುರ: ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ಎದುರು ಕಾಂಗ್ರೆಸ್ ಪಕ್ಷದವರು ಬಿಜೆಪಿಯ ವಿರುದ್ಧ ಪ್ರತಿಭಟನೆ ನಡೆಸಿದರು. 

ಬಿಜೆಪಿ ಆಡಳಿತದ ಸಮಯದಲ್ಲಿ ಜಾರಿಗೆ ತಂದ ಕೆಲವು ಕ್ರಮಗಳಿಂದ ರಾಜ್ಯದ ಜನತೆ ಈಗ ಅನುಭವಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಪ್ರತಿಭಟನಕಾರರು ವಿವರಿಸಿದರು. 

9/ 11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಮತ್ತು ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷದಿಂದ ಜನತೆಗೆ ವಾಸ್ತವ ವಿಚಾರ ತಿಳಿಸುವ ಮತ್ತು ಬಿಜೆಪಿ ಸುಳ್ಳು ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಜಿ. ತಿಮ್ಮಪೂಜಾರಿ ಪ್ರಸ್ತಾವಿಕ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಡವರ ಪರವಾದವುಗಳಾಗಿವೆ. ದೇಶ ಹಾಗೂ ರಾಜ್ಯಕ್ಕೆ ಕೊಡುಗೆ ನೀಡಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರ ಪರವಾಗಿ ಯೋಜನೆಗಳನ್ನ ನೀಡದೆ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರೆಂಟಿ ಯೋಜನೆಗಳನ್ನು ಬಡವರಿಂದ ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಎಂ. ಎ. ಗಪೂರ್  ಮಾತನಾಡಿ ಬಿಜೆಪಿ ಸರ್ಕಾರದ ಸುಳ್ಳಿನ ವೈಫಲ್ಯಗಳನ್ನು ಬಿಚ್ಚಿಟ್ಟರು. ಬಿಜೆಪಿಯವರು ಸುಳ್ಳಿನ ರಾಜಕಾರಣ  ಮಾಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವ ಪ್ರತಿಭಟನೆಗಳು ಬಿಜೆಪಿಯಿಂದ ಆಗುತ್ತಿದೆ ಎಂದು ಬಿಜೆಪಿ ನಡೆಸಿದ ಪ್ರತಿಭಟನೆ ಬಗ್ಗೆ ವಿವರಣೆ ನೀಡಿ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಗಣೇಶ್ ಕೆ. ನೆಲ್ಲಿಬೆಟ್ಟು ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದರ ಬಗ್ಗೆ  ಆಡಳಿತ ಪಕ್ಷವೇ ಪ್ರತಿಭಟನೆ ಮಾಡುವುದು ಎಷ್ಟು ಸರಿ. ಏನೇ ಸಮಸ್ಯೆಗಳಿದ್ದರೂ ಜನ ಪ್ರತಿನಿಧಿಗಳು ಕೆಲಸವನ್ನ ಇಲ್ಲಿನ ಆಡಳಿತ ಸದಸ್ಯರು ಸರಿ ಮಾಡಿ ಕೊಡುವುದು ಅವರ ಧರ್ಮವೇ ವಿನಹ ಪ್ರತಿಭಟನೆ ಮಾಡಿ ಸುಳ್ಳಿನ ಪ್ರಪಂಚ ಕಟ್ಟಿ ಜನಪ್ರತಿನಿಧಿಗಳನ್ನು ತಮ್ಮ ರಾಜಕೀಯಕ್ಕೋಸ್ಕರ ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಗೋಪಾಲ ಬಂಗೇರ, ಶೇಖರ್ ಕಾರ್ಕಡ, ದಿನೇಶ್ ಬಂಗೇರ ಗುಂಡ್ಮಿ, ಅಚ್ಚುತ್ ಪೂಜಾರಿ, ರತ್ನಾಕರ್ ಪೂಜಾರಿ ಪಾರಂಪಳ್ಳಿ, ಮಹಾಬಲ ಮಡಿವಾಳ, ಸೂರ್ಯಕಾಂತ್ ಶೆಟ್ಟಿ, ನಾಗೇಶ್ ಪೂಜಾರಿ ಪಾರಂಪಳ್ಳಿ,  ನರಸಿಂಹ ದೇವಾಡಿಗ ನೆಲ್ಲಿಬೆಟ್ಟು, ಶ್ರೀನಿವಾಸ್ ಶೆಟ್ಟಿಗಾರ್ ಗುಂಡ್ಮಿ, ಗಿರೀಶ್ ತೊಡಕಟ್ಟು, ಅಶೋಕ್ ಬಡಾಹೋಳಿ, ಪ್ರತಾಪ್ ಪಾರಂಪಳ್ಳಿ, ಯಾಶಿನ್ ಪಾರಂಪಳ್ಳಿ, ರಮೇಶ್ ಮೂಡ್ ಹೋಳಿ, ಗಣೇಶ್ ಗುಂಡ್ಮಿ, ರಾಜು ಪೂಜಾರಿ ತೋಡಕಟ್ಟು, ಯಾಶಿನ್ ಪಡುಕೆರೆ, ಉಮೇಶ್ ಪಡುಬೈಲ್, ಉಮೇಶ್ ಕುಂದರ್ ಗುಂಡ್ಮಿ, ವಸಂತಿ, ಪ್ರೇಮ ಗಣೇಶ್ ಮೆಂಡನ್ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ವಿರೋಧ ಪಕ್ಷದ ನಾಯಕ ಪಿ. ಶ್ರೀನಿವಾಸ್ ಅಮೀನ್ ಸ್ವಾಗತಿಸಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರವೀಂದ್ರ ಕಾಮತ್ ಗುಂಡ್ಮಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article