
ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಪರಿಸರದಲ್ಲಿ ‘ವನ ಜೀವನ ಯಜ್ಞ-2025’
Monday, July 21, 2025
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು ಇದರ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗವು ಕಾಸರಗೋಡಿನ ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರದ ಸಹಯೋಗದೊಂದಿಗೆ ‘ವನ ಜೀವನ ಯಜ್ಞ-2025’ ಕಾರ್ಯಕ್ರಮ ಜು.19 ರಂದು ಪೊಸಡಿಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇರಳ ಅರಣ್ಯ ಇಲಾಖೆಯಿಂದ ಒದಗಿಸಲಾದ ವಿವಿಧ ತಳಿಯ 100ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಇಂಗು ಗುಂಡಿ ಅಭಿವೃದ್ಧಿಪಡಿಸುವುದರ ಬಗ್ಗೆ ಮಾಹಿತಿ ನೀಡಲಾಯಿತು.
ಪ್ರಾಧ್ಯಾಪಕ ಪ್ರೊ. ಗಣರಾಜ್ ಕರುವಜೆ ಅವರು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಸತ್ಯಪ್ರಕಾಶ ಇ.ಕೆ., ಶ್ರೀ ಕೇಶವ ಪ್ರಸಾದ್ ಎಡಕ್ಕಾನ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಇತರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಸಹಕರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಧ್ಯಾನ ಮಂದಿರದ ಅಧ್ಯಕ್ಷ ಕಕ್ವೆ ಶಂಕರ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.