ಧರ್ಮಸ್ಥಳ ಪ್ರಕರಣ-ವಿಶೇಷಾ ತನಿಖಾ ತಂಡದ ರಚನೆ: ಸ್ವಾಗತರ್ಹ
ಗುರುವಾಯನಕೆರೆ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಅನಾಮಿಕ ವ್ಯಕ್ತಿ ಪೊಲೀಸರಿಗೆ ನೀಡಿದ ದೂರು ಮತ್ತು ಕೋರ್ಟ್‌ನಲ್ಲಿ ನೀಡಿದ ಹೇಳಿಕೆಯಂತೆ ಮುಂದಿನ ತನಿಖೆಗೆ ಪ್ರಣವ್ ಮೊಹಂತಿ ನೇತೃತ್ವದ 4 ದಕ್ಷ ಐಪಿಎಸ್ ಅಧಿಕಾರಿಗಳಿರುವ ವಿಶೇಷಾ ತನಿಖಾ ತಂಡವನ್ನು ಸರಕಾರ ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೂತಿರುವ ಶವದೊಂದಿಗೆ ಹೂತು ಹೋದ ಕಟು ಸತ್ಯಗಳು ಹೊರಬರಲಿ, ಕುಟುಂಬದವರಿಗೆ ನ್ಯಾಯ ಸಿಗಲಿ ಹಾಗೂ ಈ ದುಷ್ಕೃತ್ಯಗಳ ಹಿಂದಿರುವ ಮಾನವರೂಪದ ರಾಕ್ಷಸರಿಗೆ ಶಿಕ್ಷೆಯಾಗಲಿ ಎಂದು ಹಾರೈಸುತ್ತೇವೆ.
2-3 ಹೆಣಗಳು ಹೊರಬಂದರೂ ಜನತಾ ನ್ಯಾಯಾಲಯದಲ್ಲಿ ಜಯ ಸಿಕ್ಕಿದಂತೆ. ನೂರಾರು ಅಕ್ರಮ, ಅನ್ಯಾಯ ದೌರ್ಜನ್ಯಗಳೇ ತಾಂಡವವಾಡುತ್ತಾ ಬಂದ ಧರ್ಮಸ್ಥಳದ ಪಾಳೇಗಾರರ ಕರಾಳ ಮುಖ ಅನಾವರಣ ಆಗಲೇಬೇಕು. ಎಸ್‌ಐಟಿಯ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೌಜನ್ಯಾ ಕೊಲೆ ಪ್ರಕರಣವನ್ನು ಸಿಬಿಐ ಹಳ್ಳ ಹಿಡಿಸಿದಂತೆ ಈ ಪ್ರಕರಣ ಆಗುವುದಿಲ್ಲ ಎಂಬ ವಿಶ್ವಾಸ ನಮಗಿದೆ.
ರಾಜ್ಯಸಭಾ ಸದಸ್ಯರಾಗಿರುವ ವೀರೇಂದ್ರ ಹೆಗ್ಗಡೆಯವರು ಎಸ್‌ಐಟಿ ರಚನೆಯನ್ನು ಸ್ವಾಗತಿಸಿ, ತನಿಖೆಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿಕೆ ನೀಡಿ, ತನ್ನ ಸಿಬ್ಬಂದಿಗಳು ಯಾವುದೇ ಮುಚ್ಚುಮರೆ ಮಾಡದೆ ಸತ್ಯವನ್ನು ತಿಳಿಸಿ ಎಂದು ತಕ್ಷಣ ಆದೇಶಿಸಬೇಕು. ಹೀಗೆ ಮಾಡದಿದ್ದಲ್ಲಿ ಅವರ ಮೇಲಿನ ಸಂಶಯ ದೃಢಪಡುತ್ತದೆ. ಅವರು ಸಂಸತ್ ಸದಸ್ಯತನಕ್ಕೆ ರಾಜೀನಾಮೆ ಕೊಡಬೇಕು. ಅವರು ಕೊಡದಿದ್ದಲ್ಲಿ ಪ್ರಧಾನಿ ಮೋದಿಯವರು ಅವರ ಸದಸ್ಯತ್ವ ರದ್ದುಗೊಳಿಸಬೇಕು. ಏಕೆಂದರೆ ಅವರ ಮೇಲೆ ನೂರಾರು ಸಿವಿಲ್ ಮತ್ತು ಕ್ರಿಮಿನಲ್ ಕೇಸ್‌ಗಳೂ ವಿಚಾರಣೆಯಾಗುತ್ತಿವೆ, ಕೆಲವು ಆದೇಶಗಳೂ ಆಗಿವೆ. ಇದನ್ನು ಮೋದಿಯವರಿಗೆ ಕಾಲಕಾಲಕ್ಕೆ ಇಮೇಲ್ ಮೂಲಕ ಗಮನಕ್ಕೆ ತಂದಿದ್ದೇವೆ. ಆದರೆ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.