
ಜು.27 ರಂದು ‘ಅಂಕುರಾ-2025’
Tuesday, July 22, 2025
ಮಂಗಳೂರು: ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆ ಜುಲೈ 27ರಂದು ‘ಅಂಕುರಾ 2025’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅಂದು ಸಂಜೆ 5.30ಕ್ಕೆ ಮಂಗಳೂರಿನ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಾಟ್ಯರಂಗ, ಪುತ್ತೂರು ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಚಾಲನೆ ನೀಡುವರು.
ಅಂಕುರಾ 2025ರ ಪ್ರಯುಕ್ತ ಉದಯೋನ್ಮುಖ ಕಲಾವಿದೇಯರಾದ ತನ್ಮಯಿ ಚಂದ್ರಶೇಖರ್ (ಬೆಂಗಳೂರು), ನೀತಾರಾ ನಾಯರ್ (ದುಬೈ), ಕೃಷ್ಣಭದ್ರಾ ನಂಬೂತಿರಿ (ಮುಂಬೈ), ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಅನುಷ್ಕಾ ಶೆಟ್ಟಿ ಹಾಗು ಶರ್ವಾಣಿ ಭಟ್ (ಮಂಗಳೂರು) ಯುಗಳ ಭರತನಾಟ್ಯ ಪ್ರಸ್ತುತಪಡಿಸುವರು.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.