ಅ.7-10: ‘ಮಿಸ್ ದಿವಾನ್ ದಿವಾ-2025’ ಸ್ಪರ್ಧೆ
Wednesday, July 16, 2025
ಮಂಗಳೂರು: ಅಸ್ತ್ರ ಗ್ರೂಪ್‌ನ ಸಹಯೋಗದಲ್ಲಿ ರಾಷ್ಟ್ರಮಟ್ಟದ ‘ಮಿಸ್ ದಿವಾನ್ ದಿವಾ-2025’ ರಾಷ್ಟ್ರ ಮಟ್ಟದ ಫ್ಯಾಶನ್ ಪಜೆಂಟ್ ಈವೆಂಟ್ ನಗರದ ಅತ್ತಾವರದ ಅವತಾರ್ ಹೊಟೇಲ್‌ನಲ್ಲಿ ಸಂಜೆ 4.30 ರಿಂದ 10 ಗಂಟೆಯವರೆಗೆ ನಡೆಯಲಿದೆ ಎಂದು ಆಯೋಜಕರಾದ ಶಾಹಿಲ್ ಹೇಳಿದರು.
ಅವರು ಇಂದು ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಈ ಈವೆಂಟ್‌ಗೆ ಶ್ರೆಯಾ ಶರಣ್, ಸಿನಿ ಶೆಟ್ಟಿ, ನಂದಿನಿ ಗುಪ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಈವೆಂಟ್‌ಗೆ ದೇಶದಾದ್ಯಂತ 50 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದು, 250 ಮಂದಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ 2 ಲಕ್ಷ ರೂ. ಬಹುಮಾನ, ಬಾಲಿವುಡ್ ಸಿನಿಮಾದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ 2 ಹಾಡುಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಮೂರು ತಿಂಗಳಿನಿಂದ ಆನ್‌ಲೈನ್ ಮೂಲಕ ಆಯ್ಕೆ ನಡೆಯುತ್ತಿದ್ದು, 150 ಜನರಲ್ಲಿ 50 ಜನರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನೋಂದಣಿ ಕಾರ್ಯ ಮುಗಿದಿದ್ದು, ಸ್ಪರ್ಧೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸ್ಪರ್ಧೆಯಿಂದ ಮಂಗಳೂರಿನ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಿದಂತಾಗುತ್ತಿದೆ. 4 ದಿನಗಳ ಕಾಲ ನಡೆಯುವ ಈ ಸ್ಪರ್ಧೆಗೆ ದೇಶದಾದ್ಯಂತ ಜನರು ಬರುವುದರಿಂದ ಜನರು ಇಲ್ಲಿಯ ಪ್ರವಾಸ ತಾಣಗಳಿಗೂ ಭೆಟಿ ನೀಡಲಿದ್ದಾರೆ ಎಂದರು.
ಮೋಡಲ್ ಸೃಷ್ಟಿ ವೇಣು ಅಸ್ತ್ರ ಗ್ರೂಪ್‌ನ ಲಂಚುಲಾಲ್, ಮಿಸ್ಟರ್ ಕರ್ನಾಟಕ ಸಂದೀಪ್ ಶೆಟ್ಟಿ ಮಾತನಾಡಿದರು.
ಅಜಯ್ ಕುಮಾರ್, ಮೋಹನ್ ದಾಸ್ ರೈ, ಇಶಿಕಾ ಮತ್ತಿತರರು ಇದ್ದರು. ಅಜಿತ್ ಸಿಂಗ್ ಸ್ವಾಗತಿಸಿ, ನಿರೂಪಿಸಿದರು.