
ಚಾಲಕನಿಲ್ಲದ ಕಾರಿನಲ್ಲಿ ಸ್ಪೀಕರ್ ಸಂಚಾರ
Wednesday, July 30, 2025
ಮಂಗಳೂರು: ಚಾಲಕ ಇಲ್ಲದೇ ಸಂಚರಿಸುವ ಕಾರು ಇದೆ ಅನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಈಗ ಅಮೇರಿಕಾ ಪ್ರವಾಸಕ್ಕೆ ತೆರಳಲಿರುವ ನಮ್ಮ ಕರ್ನಾಟಕದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಶಾಸಕರ ತಂಡ ಅಮೇರಿಕಾದಲ್ಲಿ ಚಾಲಕ ರಹಿತ ಕಾರಿನಲ್ಲಿ ಸಂಚರಿಸುವ ವಿಡಿಯೋ ವೈರಲ್ ಆಗಿದೆ.
ಅಮೇರಿಕಾದ ಬೋಸ್ಟನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಪೀಕg ಗಳ ಸಮ್ಮೇಳನದಲ್ಲಿ ಭಾಗವಹಿಸಲು ಶಾಸಕರುಗಳ ಜೊತೆ ಸ್ಪೀಕರ್ ಯು.ಟಿ ಖಾದರ್ ತೆರಳಿದ್ದಾರೆ. ಈ ವೇಳೆ ಅಮೇರಿಕಾದ ರಸ್ತೆಯಲ್ಲಿ ಡ್ರೈವರ್ ಇಲ್ಲದ ಕಾರಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಸಂಚಾರಿಸಿದ್ದಾರೆ.