
ಧರ್ಮಸ್ಥಳದಲ್ಲಿ ಅಳಿಕೆಯ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾಸೇವೆ
Wednesday, July 30, 2025
ಉಜಿರೆ: ಅಳಿಕೆಯ ಸತ್ಯಸಾಯಿ ಲೋಕಸೇವಾ ಶಿಕ್ಷಣಸಂಸ್ಥೆಯ ‘ಸಾಯಿ ಸಿಂಪನಿ’ ತಂಡದ ವಿದ್ಯಾರ್ಥಿಗಳು ಬುಧವಾರ ಧರ್ಮಸ್ಥಳದಲ್ಲಿ ಕಲಾಸೇವೆ ಅರ್ಪಿಸಿದರು.
ಪೊಲೀಸ್ ಬ್ಯಾಂಡ್‌ಸೆಟ್ ವಾದನದ ಬಗ್ಗೆ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿಗಳು ‘ಸಾರೇ ಜಹಾಂ ಸೆ ಅಚ್ಛಾ, ಸತ್ಯಂ ಶಿವಂ ಸುಂದರಂ’ ಮೊದಲಾದ ರಾಷ್ಟ್ರಭಕ್ತಿಯ ಪದ್ಯಗಳನ್ನು ಸುಶ್ರಾವ್ಯವಾಗಿ ಸಾದರಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.
ಅಳಿಕೆಯ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ನೇತೃತ್ವದಲ್ಲಿ ಉಪನ್ಯಾಸಕರಾದ ಚಂದ್ರಶೇಖರ ಭಟ್, ಜನಾರ್ದನ ನಾಯ್ಕ, ಚಂದ್ರಶೇಖರ ಜೈನ್ ಮತ್ತು ನಾಗರಾಜ ಅವರೊಂದಿಗೆ ೪೩ ವಿದ್ಯಾರ್ಥಿಗಳು ಧರ್ಮಸ್ಥಳಕ್ಕೆ ಬಂದಿದ್ದು, ಸಂಸ್ಥೆಯ ಪರವಾಗಿ ಹೆಗ್ಗಡೆಯವರನ್ನು ಗೌರವಿಸಿದರು.