
ರಾಷ್ಟ್ರೀಯ ವೈದ್ಯರ ದಿನಾಚರಣೆ: ಎಕ್ಸ್‌ಪರ್ಟ್ ವಿದ್ಯಾರ್ಥಿಗಳಿಂದ ವೈದ್ಯರಿಗೆ ಸನ್ಮಾನ
Wednesday, July 2, 2025
ಮಂಗಳೂರು: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ವೈದ್ಯರನ್ನು ಭೇಟಿಯಾಗಿ ಶುಭಾಶಯ ಕೋರಿದರು.
ಸ್ಥಳೀಯ ಅಡ್ಯಾರು ಗ್ರಾಮ ಪಂಚಾಯಿತಿಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿ ಡಾ. ಆಶಾ ಬಿ. ಅವರಿಗೆ ಕಾಲೇಜಿನ ಪರವಾಗಿ ಹೂಗುಚ್ಛ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಕಠಿಣ ಪರಿಶ್ರಮದಿಂದ ವೈದ್ಯರಾಗುವ ಕನಸನ್ನು ಸಾಕಾರಗೊಳಿಸಬಹುದು. ಸಾರ್ವಜನಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅನನ್ಯ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ, ಕೋಚಿಂಗ್ ಮುಖ್ಯಸ್ಥ ಗುರುದತ್ತ್, ಕನ್ನಡ ವಿಭಾಗದ ಉಪನ್ಯಾಸಕ ಸುರೇಶ್ ಎಡನಾಡು ಉಪಸ್ಥಿತರಿದ್ದರು.
ಕಾಲೇಜು ಕ್ಯಾಂಪಸ್ಸಿನಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಕಾಲೇಜಿನ ಕ್ಯಾಂಪಸ್ ವೈದ್ಯಾಧಿಕಾರಿ ಡಾ. ಅಹದ್ ಅವರನ್ನು ಸನ್ಮಾನಿಸಲಾಯಿತು. ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ, ಕ್ಯಾಂಪಸ್ ನಿವಾಸಿ ಮಾರ್ಗದರ್ಶಕಿ ಅನಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು.