
ಗುರುತ್ವ ಕಳೆದುಕೊಂಡ ಪುತ್ತೂರು ವಿಧ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಭಿನ್ನ ಮತೀಯತೆಯೇ ಸಮಸ್ಯೆಯೇ?: ಕೆ.ಅಶ್ರಫ್
ಮಂಗಳೂರು: ಇತ್ತೀಚೆಗೆ ಪುತ್ತೂರಿನ ವಿಧ್ಯಾರ್ಥಿನಿಯೋರ್ವಳಿಗೆ ‘ಬೇಟಿ ಪಡಾವೋ ಬೇಟಿ ಬಚಾವೋ’ ಪಕ್ಷದ ನಾಯಕನ ಪುತ್ರ ಉಚಿತ ಶಿಶು ಗ್ಯಾರಂಟಿ ಯೋಜನೆ ಅಡಿಯಲ್ಲಿ ಭರವಸೆ ನೀಡಿ, ಕಾಮ ಸಂಘರ್ಷ ಹೋರಾಟ ನಡೆಸಿ ಶಿಶುದಾನ! ಮಾಡಿರುತ್ತಾನೆ. ಇಷ್ಟಾದರೂ, ‘ಬೇಟಿ ಪಡಾವೋ ಬೇಟಿ ಬಚಾವೋ’ ರಕ್ಷಕರು ಸುಮ್ಮನಿದ್ದಾರೆ.
ಹಾಲಿ ವಿದ್ಯಾರ್ಥಿನಿಗೆ ನೀಡಿದ ಕೊಡುಗೆ ಶಿಶುದಾನವನ್ನು ಕೊಂಡಾಡಲು ಕೊನೆಗೆ ಪುತ್ತೂರಿನ ಮುಸ್ಲಿಮ್ ನಾಯಕರು ರಂಗಕ್ಕೆ ಇಳಿಯಬೇಕಾಯ್ತು. ಬಿಜೆಪಿಯ ಪುತ್ರನ ಸ್ಥಾನದಲ್ಲಿ ಇಂದು ಭಿನ್ನರು ಇದ್ದಿದ್ದರೆ ಪಿಶಾಚಿಗಳು ಜಿಲ್ಲೆಯಾದ್ಯಂತ ಕೇಕೆ ಹಾಕುತ್ತಿದ್ದವು. ವಿವಾಹ ಪೂರ್ವ ಶಿಶುದಾನದ ಬಗ್ಗೆ ಇಂದು ಜಿಲ್ಲೆಯ ಸಂಸ್ಕಾರವಂತರು ಹುಡುಗನಿಗೆ ಶಿಫಾರಸು ನೀಡುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಖೇದಕರ.
ಇನ್ನಾದರೂ ಜಿಲ್ಲೆಯ ಸಂಸ್ಕಾರವಂತರು ಮೌನ ಮುರಿದು ಈ ದಾನವನ್ನು ಕೊಂಡಾಡಲಿ! ಆಗಲಾದರೂ ಸಂಸ್ಕಾರವಂತರು ಈ ಜಿಲ್ಲೆಯಲ್ಲಿ ಉಳಿದಿದ್ದಾರೆ ಎಂಬುದು ತಿಳಿಯಲಿದೆ. ಜಿಲ್ಲೆಯ ಪುಡಿ ರೌಡಿಗಳ ಮರಣವನ್ನು ವಿಜೃಂಭಿಸಿ ಪಟ್ಟ ಕಟ್ಟುವ ಜಿಲ್ಲಾ ರಾಜ್ಯಾದಿ ನಾಯಕರು, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಲಾದರೂ ಒಮ್ಮೆ ಜಿಲ್ಲೆಗೆ ಬರಲಿ. ಶೋಭಕ್ಕ ಒಮ್ಮೆಯಾದರೂ ಬಂದು ಮಗುವಿನ ಮುಖ ದರ್ಶನವಾದರೂ ಮಾಡಿ ಹೋಗಲಿ ಎಂದು ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.