ವಿವಿಧ ಬೆಡಿಕೆ ಈಡೇರಿಕೆಗೆ ಕೆಎಸ್‌ಆರ್‌ಟಿಸಿ ನೌಕರರ ಆಗ್ರಹ

ವಿವಿಧ ಬೆಡಿಕೆ ಈಡೇರಿಕೆಗೆ ಕೆಎಸ್‌ಆರ್‌ಟಿಸಿ ನೌಕರರ ಆಗ್ರಹ

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾದ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ನಿಗಮಗಳ ನೌಕರರು  ಜು.30ರಂದು ಉಪವಾಸ ಸತ್ಯಾಗ್ರಹ ಮತ್ತು ಆ.5ರಂದು ಅನಿರ್ದಿಷ್ಠಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ‍್ಸ್ ಯೂನಿಯನ್ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಜಯರಾಮ ಶೆಟ್ಟಿ, ವೇತನ ಪರಿಷ್ಕರಣೆಯಾಗಿ ವರುಷಗಳು ಉರುಳಿದರೂ ಇನ್ನೂ ಜಾರಿಯಾಗಿಲ್ಲ. ನಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟ ಅನಿವಾರ್ಯ ಎಂದರು.

ಕರ್ನಾಟಕ ರಾಜ್ಯದ ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಈ ಹಿಂದಿನ ವೇತನ ಪರಿಷ್ಕರಣೆ 2020ರಿಂದ 2023ರವಗೆ ನಾಲ್ಕು ವರ್ಷದ ಅವಧಿಗೆ ಅನ್ವಯವಾಗಿತ್ತು.  ಈ ಆದೇಶವನ್ನು ಪೆ.2023ರಲ್ಲಿ ಹೊರಡಿಸಿದ್ದು, ನಂತರ ಮಂತ್ರಿಮಂಡಲದಲ್ಲಿ ಅನುಮೋದನೆಗೊಂಡಿತ್ತು. ಈ ನಡುವೆ ಕೊರೋನಾ ಸಮಯದಲ್ಲಿ 38 ತಿಂಗಳ ಹಿಂಬಾಕಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ನೌಕರರಿಗೆ ಪಾವತಿಸಲು ಬಾಕಿ ಇರುವ ಬಗ್ಗೆ ಧಾರ್ಮಿಕ ದತ್ತಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹಲವು ಬಾರಿ ಮಾಧ್ಯಮದ ಮುಂದೆ ಹೇಳಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 38 ತಿಂಗಳ ಹಿಂಬಾಕಿ ಪಾವತಿಸಲು ಸಾಧ್ಯವಿಲ್ಲ ಮತ್ತು ವೇತನ ಪರಿಷ್ಕರಣೆಯನ್ನು 2027ರ ಬಳಿಕ ಮಾಡಲಾಗುವುದು ಎಂದು ತಿಳಿಸಿರುವುದು ಕಾರ್ಮಿಕರಲ್ಲಿ ಹತಾಶೆಯನ್ನುಂಟುಮಾಡಿದೆ. ನಮ್ಮದು ನ್ಯಾಯಯುತ ಬೇಡಿಕೆ ಹಿಂಬಾಕಿಯನ್ನು ಪಾವತಿಸಲೇ ಬೇಕು ಎಂದವರು ಆಗ್ರಹಿಸಿದರು.

ಪ್ರಮುಖರಾದ ಮನೋಹರ ಶೆಟ್ಟಿ, ದಿನೇಶ್ ಸಿ.ಎಚ್., ಶಾಂತಪ್ಪ, ಪದ್ಮನಾಭ, ಪರಮೇಶ್ವರ, ಪ್ರವೀಣ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article