
ಧರ್ಮಸ್ಥಳ ಪ್ರಕರಣಕ್ಕೆ ಪ್ರಣವ್ ಮೊಹಂತಿ ಎಂಟ್ರಿ: ಅನಾಮಧೇಯ ದೂರುದಾರನ ತನಿಖೆ ಮತ್ತಷ್ಟು ಚುರುಕು!
Sunday, July 27, 2025
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿರುವ ಅನಾಮಧೇಯ ದೂರುದಾರನ ತನಿಖೆಗೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿಯವರ ಎಂಟ್ರಿ ನಡೆದಿದೆ.
ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಅವರು ರವಿವಾರ ಮಧ್ಯಾಹ್ನ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅಲ್ಲಿ ಎಸ್ಐಟಿ ತನಿಖಾಧಿಕಾರಿಗಳಾದ ಅನುಚೇತ್ ಹಾಗೂ ಜಿತೇಂದ್ರ ಕುಮಾರ್ ದಯಾಮ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅವರು ಆಗಮಿಸಿದರು.
ಮಧ್ಯಾಹ್ನ 12ಗಂಟೆ ಸುಮಾರಿಗೆ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಮಂಗಳೂರಿನ ಮಲ್ಲಿಕಟ್ಟೆ ಐಬಿಯಲ್ಲಿರುವ ಎಸ್ಐಟಿ ಕಚೇರಿಗೆ ಪ್ರಣವ್ ಮೊಹಂತಿ ಆಗಮಿಸಿದರು. ಈ ಮೂಲಕ ಇಂದು ಅನಾಮಧೇಯ ದೂರುದಾರನ ತನಿಖೆ ಮತ್ತಷ್ಟು ಚುರುಕೊಳ್ಳಲಿದೆ.