ಸೇವಾ ನ್ಯೂನತೆ: ‘ಮೋರ್’ಗೆ ದಂಡ

ಸೇವಾ ನ್ಯೂನತೆ: ‘ಮೋರ್’ಗೆ ದಂಡ

ಮಂಗಳೂರು; ಸೇವಾ ನ್ಯೂನತೆಯ ಹಿನ್ನೆಲೆಯಲ್ಲಿ ಚಿಲಿಂಬಿಯಲ್ಲಿರುವ ಮೋರ್ ಸೂಪರ್ ಮಾರ್ಕೆಟ್‌ಗೆ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗ ರೂ. 39,105 ದಂಡ ವಿಧಿಸಿದೆ.

ಪ್ರಕರಣದ ವಿವರ..

2022ರ ಆ.28ರಂದು ಸಾಮಾಜಿಕ ಹೋರಾಟಗಾರ ಎಚ್, ಶಶಿಧರ್ ಶೆಟ್ಟಿಯವರು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಲು ಮಂಗಳೂರಿನ ಚಿಲಿಂಬಿ ಬಳಿಯ ಸೂಪರ್ ಮಾರುಕಟ್ಟೆಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿದ ನಂತರ, ರೂ. 1890.89 ವನ್ನು ತಮ್ಮ ಕರ್ನಾಟಕ ಎಸ್ಬಿ ಖಾತೆಯಿಂದ ಹಣವನ್ನು oಟಿ ಟiಟಿe ಮುಕಾಂತರ ವರ್ಗಾಯಿಸಿದ್ದರು, ಆದರೆ ಬಿಲ್ಲಿಂಗ್  ಕೌಂಟರ್‌ನಲ್ಲಿರುವ ಸಿಬ್ಬಂದಿ ಈ ಮೊತ್ತ ನಿಮ್ಮ ಖಾತೆ ಇಂದ ನಮಗೆ ಬಂದಿರುವುದಿಲ್ಲ, ಇನ್ನೊಮ್ಮೆ ನಗದು ರೂ. 1890.89 ಪಾವತಿಸಲು ಒತ್ತಾಯಿಸಿದ್ದಾರೆ, ಆಗ ಸಮಸ್ಯೆಯನ್ನು ಪರಿಹರಿಸಲು ದೂರುದಾರರು ರೂ.20 ಮೌಲ್ಯದ ಮತ್ತೊಂದು ವಸ್ತುವನ್ನು ಖರೀದಿಸಿ ರೂ.1890.89 ಕ್ಕೆ ಸೇರಿಸಿ ಪುನಃ ತಮ್ಮ ಖಾತೆ ಇಂದ ರೂ. 1,910.89 ಅನ್ನು ವರ್ಗಾಯಿಸಿರುತ್ತಾರೆ. ಆದರೂ ಅಲ್ಲಿನ ಸಿಬ್ಬಂದಿ ತಮ್ಮ ಖಾತೆಗೆ ಇನ್ನೂ ರೂ. 1,910.89 ಬಂದಿಲ್ಲ ಎಂದು ಹೇಳಿರುವುದರಿಂದ  ರೂಪಾಯಿ 1911ನ್ನು ನಗದು ರೂಪದಲ್ಲಿ ಕೊಟ್ಟು ಬಂದಿರುತ್ತಾರೆ, 

ತದ ನಂತರ ತಮ್ಮ ಬ್ಯಾಂಕ್ ಖಾತೆ ಇಂದ ಎರಡು ಬಾರಿ ಮೋರ್ ಸೂಪರ್ ಮಾರ್ಕೆಟ್ ಖಾತೆಗೆ ಹಣ ವರ್ಗಾವಣೆ ಆದ ಬ್ಯಾಂಕ್ ಪಾಸ್ ಬುಕ್ ಪ್ರತಿ ತೋರಿಸಿದರೂ ಮೋರ್ ಸುಪರ್ ಮಾರ್ಕೆಟ್ ನಿಂದ ಹಣ ಹಿಂತಿರಿಗಿಸಿರಲಿಲ್ಲ, ಇದರಿಂದ ನೊಂದ ದೂರುದಾರ  ಶಶಿಧರ್ ಶೆಟ್ಟಿ  ಮೋರ್ ಸುಪರ್ ಮಾರ್ಕೆಟ್ ವಿರುದ್ದ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಯು/ಎಸ್ 35 ಅನ್ನು ದಾಖಲಿಸಿದ್ದರು.

ಸಾಕ್ಷಿ ಆಧಾರಗಳನ್ನು ಪರಿಶೀಲನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 71&72 of consumer protection act- 2019 ಕಾಯಿದೆಯ ಪ್ರಕಾರ ಸೂಪರ್ ಮಾರ್ಕೆಟ್ ನ ಆಡಳಿತ ಮಂಡಳಿಯ ಸೇವೆಯ ಕೊರತೆ, ದೂರುದಾರರ ಮಾನಸಿಕ ಸಂಕಟ ಮತ್ತು ಅನಾನುಕೂಲತೆಗಾಗಿ ಒಟ್ಟು ಮೊತ್ತ 39,105 ದೂರುದಾರಿಗೆ ನೀಡುವಂತೆ ಮೋರ್ ಆಡಳಿತ ಮಂಡಳಿಗೆ ದಂಡ ವಿಧಿಸಿ ಆದೇಶ ನೀಡಿದೆ. ದೂರುದಾರರ ಪರವಾಗಿ ವಕೀಲರಾದ ಬಿಪಿ ಭಟ್ ವಾದ ಮಂಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article