ಎರಡು ವರ್ಷದ ಬಳಿಕ ಶಾಸಕರ ಜನಸ್ಪಂದನೆ ಅಭಿನಂದನೀಯ: ರಕ್ಷಿತ್ ಶಿವರಾಂ

ಎರಡು ವರ್ಷದ ಬಳಿಕ ಶಾಸಕರ ಜನಸ್ಪಂದನೆ ಅಭಿನಂದನೀಯ: ರಕ್ಷಿತ್ ಶಿವರಾಂ


ಉಜಿರೆ: ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳಿಗೆ ಬಯ್ಯುತ್ತಾ, ಪೊಲೀಸ್ ಠಾಣೆಗೆ ನುಗ್ಗುತ್ತಾ, ಮೈಸೂರು, ಬೆಂಗಳೂರು ಸುತ್ತುತ್ತಾ ಇದ್ದ ಶಾಸಕರು ಇದೀಗ ಕಲ್ಲೇರಿಯಲ್ಲಿ ರಸ್ತೆ ಅವ್ಯವಸ್ಥೆ ಬಗ್ಗೆ ಪ್ರತಿಭಟನೆ ಮಾಡುವ ಮೂಲಕ ಇದೀಗ ಜನರ ಸ್ಪಂದನೆಗೆ ಬಂದಿದ್ದು ಅಭಿನಂದನೀಯ. ಅವರು ಇನ್ನಾದರು ತಾಲೂಕಿನಲ್ಲಿ ಇದ್ದು ಜನರ ಸಮಸ್ಯೆಗೆ ಸ್ಪಂದಿಸಿ ತಾಲೂಕಿನ ಅಭಿವೃದ್ಧಿಗೆ ಗಮನ ಹರಿಸಲಿ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಅವರು ಜು.7 ರಂದು ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಸರಕಾರವನ್ನು ಅನುದಾನ ನೀಡುತ್ತಿಲ್ಲ ಎಂದು ಟೀಕಿಸುತ್ತಾ ಶಾಸಕರು ಜನರನ್ನು ಮೋಸಮಾಡಲು ಹೊರಟಿದ್ದಾರೆ. ಪ್ರತಿ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ತಲಾ 10 ಕೋಟಿ ರೂ. ಮಂಜೂರು ಮಾಡಿದ್ದು, ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ಅನುಷ್ಟಾನಗೊಂಡಿದೆ. ಆದರೆ ಬೆಳ್ತಂಗಡಿ ತಾಲೂಕಿನ ಶಾಸಕರು ಇದಕ್ಕೆ ಯೋಜನೆಯನ್ನೇ ಸಿದ್ದಪಡಿಸಿಲ್ಲ. ಇದರಿಂದ ತಾಲೂಕಿಗೆ ನಷ್ಟ. ಮಳೆ ಹಾನಿಗೆ ಸರಕಾರ 70 ಕೋಟಿ ರೂ. ಮಂಜೂರು ಮಾಡಿದ್ದು ಬೆಳ್ತಂಗಡಿ ತಾಲೂಕಿಗೂ ಅನುದಾನ ನೀಡಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಅಲ್ಪಸಂಖ್ಯಾತ ನಿಗಮದ ಅಡಿಯಲ್ಲಿ ದೇವಸ್ಥಾನ, ಚರ್ಚ್, ಮಸೀದಿ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಸರಕಾರ ಮಂಜೂರುಮಾಡಿದೆ. ತಾಲೂಕಿನ ಜನರ ಸಮಸ್ಯೆ ಆಲಿಸಲು ಕೆಡಿಪಿ ಸಭೆ ಕರೆಯಬೇಕಾದ ಶಾಸಕರು ಸಭೆ ಕರೆದಿಲ್ಲ. ಈ ಬಗ್ಗೆ ಜನರೇ ಪ್ರಶ್ನಿಸಬೇಕಾಗಿದೆ ಎಂದ ಅವರು ಸುಲ್ಕೇರಿ ಭಾಗದ ಕೆಲವು ಕಡೆ ವಿದ್ಯುತ್ ಸಂಪರ್ಕ ನೀಡಲು ಜನರ ಬೇಡಿಕೆ ಇದ್ದು ಶಾಸಕರು ಕೇವಲ ಮೀಟರ್ ಅಳವಡಿಸಿ ಜನರನ್ನು ನಂಬಿಸಲು ಹೊರಟಿದ್ದಾರೆ. ಆದರೆ ನಾನು ಮತ್ತು ಕಾಂಗ್ರೆಸ್ ಮುಖಂಡರು ಪ್ರಯತ್ನ ಪಟ್ಟು ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಬೆಳ್ತಂಗಡಿ ನ್ಯಾಯಾಲಯದ ಕಟ್ಟಡ ಹಳೆಯದಾಗಿದ್ದು, ಅದಕ್ಕಾಗಿ ಸರಕಾರಕ್ಕೆ ಮನವಿ ನೀಡಲಾಗಿತ್ತು. ಇದೀಗ 20 ಕೋಟಿ ರೂ. ಮಂಜೂರು ಮಾಡಿದ್ದು, ಸರಕಾರ ಈಗಾಗಲೇ 9 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಶಿಲಾನ್ಯಾಸ ಮಾಡಲಾಗುವುದು, ಮಚ್ಚಿನದಲ್ಲಿ 5 ಕೋಟಿ ರೂ. ವೆಚ್ಚದ ಪ್ರಾಥಮಿಕ ಅರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ಹದಗೆಟ್ಟಿದ್ದು ಕೇಂದ್ರದ ಅನುದಾನದಲ್ಲಿ ದುರಸ್ತಿ ಮಾಡಲಾಗುವುದು ಎಂದು ಸಂಸದರು ಮತ್ತು ಶಾಸಕರು ಗುದ್ದಲಿ ಪೂಜೆ ಮಾಡಿದ್ದು, ಅರ್ಧದವರೆಗೆ ಮಾತ್ರ ದುರಸ್ತಿ ಮಾಡಲಾಗಿದೆ. ನಿಮಗೆ ಸಾಧ್ಯವಾಗದಿದ್ದರೆ ಜನರಿಗಾಗಿ ನಾವು ಅನುದಾನ ತರಿಸುತ್ತೇವೆ ಎಂದ ಅವರು ಕಲ್ಲೇರಿಯಲ್ಲಿ ಏಕಲವ್ಯ ಶಾಲೆ ಕಕ್ಕಿಂಜೆಯಲ್ಲಿ ಮೌಲಾನ ಅಜಾದ್ ಶಾಲೆ ಮಂಜೂರಾಗಿದ್ದು ಶೀಘ್ರವೆ ಅಂತಿಮ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ 1000 ಗ್ರಾಮ ಸಹಾಯಕರ ಹುದ್ದೆ ಮಂಜೂರಾಗಿದ್ದು ತಾಲೂಕಿಗೂ ನೇಮಕಾತಿ ಆಗಲಿದೆ ಎಂದರು. ತಾಲೂಕಿನ 16 ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ಮಂಜೂರಾಗಿದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article