
ಸುನಿಲ್ ಕೊಂಕಣ ರೈಲ್ವೆ ನೂತನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
Tuesday, July 1, 2025
ಮಂಗಳೂರು: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸುನಿಲ್ ನರ್ಕರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಸುನಿಲ್ ನರ್ಕರ್ ಅವರು 1997 ರಲ್ಲಿ ಕೊಂಕಣ ರೈಲ್ವೆಯಲ್ಲಿ ವಾಣಿಜ್ಯ ಇಲಾಖೆಯಲ್ಲಿ ಸೇರಿದರು ಮತ್ತು ಬಳಿಕ ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರತ್ನಗಿರಿಯಲ್ಲಿ ಪ್ರಾದೇಶಿಕ ಸಂಚಾರಿ ವ್ಯವಸ್ಥಾಪಕ (ಆರ್‌ಟಿಎಂ) ಮತ್ತು ಮಡಗಾಂವ್‌ನಲ್ಲಿ ಹಿರಿಯ ಪ್ರಾದೇಶಿಕ ಸಂಚಾರಿ ವ್ಯವಸ್ಥಾಪಕ (ಸೀನಿಯರ್ ಆರ್‌ಟಿಎಂ) ಮತ್ತು ಬೇಲಾಪುರದ ಕಾರ್ಪೊರೇಟ್ ಕಚೇರಿಯಲ್ಲಿ ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.