
ಮಂಗಳೂರು-ಕಾಸರಗೋಡು: ರಾಜಹಂಸ ಸೇವೆ ಪ್ರಾರಂಭ
Friday, July 4, 2025
ಮಂಗಳೂರು: ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ, ಮಂಗಳೂರು-2ನೇ ಘಟಕದಿಂದ ನೂತನವಾಗಿ ಮಂಗಳೂರು ಕಾಸರಗೋಡು ಮಾರ್ಗದಲ್ಲಿ ಹೊಸದಾಗಿ ’ರಾಜಹಂಸ ಸೂಪರ್ ಫಾಸ್ಟ್’ ಸಾರಿಗೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲು ಯೋಜಿಸಲಾಗಿದೆ.
ನಿಲುಗಡೆಗಳ ವಿವರ..:
ತೊಕ್ಕೊಟ್ಟು, ಬೀರಿ, ತಲಪಾಡಿ, ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕೈಕಂಬ, ನಯಾಬಜಾರ್, ಬಂದ್ಯೋಡು, ಕುಂಬ್ಳೆ. ಒಟ್ಟು ಪ್ರಯಾಣ ದರ 100 ರೂ. ಸಾರ್ವಜನಿಕ ಪ್ರಯಾಣಿಕರು ನೂತನ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.